ಅಂದು ಸ್ವಾತಂತ್ರ್ಯ ಚಳವಳಿಗೆ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಹಾಕಿಕೊಟ್ಟ ಗಣೇಶ ಉತ್ಸವದ ಮಾರ್ಗ ಇಂದು ದೇಶದ ಪರಂಪರೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಗಣೇಶೋತ್ಸವದ ಸಂಭ್ರಮವೂ ಇಮ್ಮಡಿಯಾಗಿದೆ. ಗಣೇಶ ವಿಸರ್ಜನೆ ವೇಳೆ ಹಾಕುವ ಹೆಜ್ಜೆಗಳು ಹಾಗೆ...

ಇಲ್ಲಿ ತಾಳ-ಲಯ ಇದಕ್ಕೆಲ್ಲ ಅವಕಾಶ ಇಲ್ಲ. ಮನಸ್ಸನ್ನು ಮುಕ್ತವಾಗಿರಿಸಿ ಮನಸಿಗೆ ಬಂದ ಸ್ಟೆಪ್ ಹಾಕಿದರೆ ಮುಗಿಯಿತು. ತಮಟೆಯ ಶಬ್ದ ಕಿವಿಗೆ ಬಿದ್ದರೆ ಮೊದಲು ಮನಸು ಕುಣಿಯುತ್ತದೆ. ನಂತರ ಕಾಲುಗಳು ನಮಗೆ ಗೊತ್ತಿಲ್ಲದಂತೆ ಹೆಜ್ಜೆ ಹಾಕಲು ಆರಂಭಿಸುತ್ತದೆ. ಇದೇ ಅಲ್ಲವೆ ತಲ್ಲೀನವಾಗುವುದು? ಎಂಬುದಕ್ಕೆ ಅರ್ಥ!

ಈ ಗಣೇಶನಿಗೆ ನಗರ, ಪಟ್ಟಣ, ಹಳ್ಳಿ, ಮಹಾನಗರ ಎಂಬ ಯಾವ ತಾರತಮ್ಯವೂ ಇಲ್ಲ. ಎಲ್ಲರ ಮನೆಗೆ ಬರುತ್ತಾನೆ.. ಎಲ್ಲ ಗಲ್ಲಿಯಲ್ಲೂ ಕುಳಿತುಕೊಳ್ಳುತ್ತಾನೆ. ಭಕ್ತರು ಹಾಕುವ ಹಾಡು, ಆರ್ಕೆಸ್ಟ್ರಾ ಸಾಂಗ್ ಗಳಿಗೂ ತಲೆದೂಗುತ್ತಾನೆ.

ಗಣೇಶ ವಿಸರ್ಜನೆಯೇ ಒಂದು ವಿಶಿಷ್ಟ ಸಂಭ್ರಮ. ಅಲ್ಲಿ ಕುಣಿತ ಹಾಕದವರಿಗೆ ಜಾಗವಿಲ್ಲ. ಆ ಕುಣಿತದ ಮಹಿಮೆಯನ್ನು ಅನುಭವಿಸಿಯೇ ನೋಡಬೇಕು. ತಮಟೆ-ಡೊಳ್ಳಿನ ಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ ಎಲ್ಲವನ್ನು ಮರೆಯುವ ಅವಕಾಶ.

ಗಣೇಶ ಉತ್ಸವಕ್ಕೆ 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಹೊಸ ಸ್ವರೂಪ ನೀಡಿದರು ನಂತರ ಅದು ರಾಷ್ಟ್ರೀಯ ಹಬ್ಬವಾಗಿ ಬದಲಾಯಿತು. 

ಆದರೆ ಗಣೇಶನ ಹೆಸರಿನಲ್ಲಿ ಇಂದು ವಂತಿಗೆ-ವಸೂಲಿ ನಡೆಯುತ್ತಿರುವ ಕಟು ಸತ್ಯವನ್ನು ಒಪ್ಪಿಕೊಳ್ಳಬೇಕು. ಪ್ಯಾರಿಸ್ ಫ್ಲಾಸ್ಟರ್ ಅನಾಹುತ ಗೊತ್ತಾಗಿ ಜನ ಮತ್ತೆ ಜೇಡಿಮಣ್ಣಿನ ಗಣೇಶನ ಮೊರೆ ಹೋಗುತ್ತಿರುವುದು ಉತ್ತಮ ಬೆಳವಣಿಗೆ. ಒಟ್ಟಿನಲ್ಲಿ ಗಣೇಶ ಹಬ್ಬ ಒಂದು ಹಬ್ಬವಾಗಿ ಉಳಿದಿಲ್ಲ. ಇದೊಂದು ಸಂಪ್ರದಾಯವಾಗಿದೆ. ಜನರು ಸಂಪೂರ್ಣವಾಗಿ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಬನ್ನಿ ನೀವು ಎರಡು ಸ್ಟೆಪ್ ಹಾಕಿ ಬನ್ನಿ...

"