ಇಸ್ಲಾಮಾಬಾದ್(ಫೆ.27): ಪಾಪ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಪಾಡಿಗೆ ದೇಶದ ಆರ್ಥಿಕ ವ್ಯವಸ್ಥೆ ಕುರಿತು ಚಿಂತನೆ ನಡೆಸುತ್ತಿದ್ದರೆ, ಸ್ಕಿನ್ ಡಾಕ್ಟರ್ ಎಂಬ ನಿಗೂಢ ವ್ಯಕ್ತಿ ಭಾರತೀಯ ವಾಯುಪಡೆಯ ದಾಳಿಯ ಎಚ್ಚರಿಕೆ ನೀಡಿ ಬೆಚ್ಚಿ ಬಿಳಿಸಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಇಮ್ರಾನ್ ಖಾನ್ ಅಧಿಕೃತ ಟ್ವಿಟ್ಟರ್ ಗೆ ಸ್ಕಿನ್ ಡಾಕ್ಟರ್ ಎಂಬ ನಿಗೂಢ ವ್ಯಕ್ತಿ ಟ್ವೀಟ್ ಮಾಡಿದ್ದು, ಇಂದು ರಾತ್ರಿ ಪಾಕ್ ನೆಲದಲ್ಲಿ ಭಾರತೀಯ ವಾಯುಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಲಿದೆ ಎಂದು ಎಚ್ಚರಿಸಿದ್ದ.

ಇನ್ನೂ ವಿಚಿತ್ರ ಸಂಗತಿ ಎಂದರೆ ಈ ಸ್ಕಿನ್ ಡಾಕ್ಟರ್ ಟ್ವಿಟ್ಟರ್ ಪ್ರೊಫೈಲ್ ನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ, ಕಾಂಗ್ರೆಸ್ ನಾಯಕ ಸಂಜಯ್ ನಿರೂಪಮ್ ಹಗೂ ಗೌರವ್ ಭಾಟಿಯಾ ಕೂಡ ಫಾಲೋ ಮಾಡುತ್ತಾರೆ.

ಯರು ಈ ಸ್ಕಿನ್ ಡಾಕ್ಟರ್?:

ಸ್ಕಿನ್ ಡಾಕ್ಟರ್ ಎಂಬ ಪ್ರೊಫೈಲ್ ಹೊಂದಿರುವ ವ್ಯಕ್ತಿ ನಿಜ ಜೀವನದಲ್ಲೂ ಚರ್ಮ ತಜ್ಞನಾಗಿದ್ದು, ಸೇನೆಯಲ್ಲಿ ವೈದ್ಯನಗಿ ಸೇವೆ ಕೂಡ ಸಲ್ಲಿಸಿದ್ದಾನೆ ಎನ್ನಲಾಗಿದೆ. ಈತ ತನ್ನ ಹೆಸರು ವಿಶ್ಸಿ ಸಿಂಗ್ ಎಂದು ಹೇಳಿಕೊಂಡಿದ್ದಾನೆ.

ಆದರೆ ಈತ ಯಾಕೆ ಭಾರತದ ವಾಯುದಾಳಿಯ ಕುರಿತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಈ ಕುರಿತು ಖುದ್ದು ಸ್ಪಷ್ಟನೆ ನೀಡಿರುವ ಸ್ಕಿನ್ ಡಾಕ್ಟರ್, ಪುಲ್ವಾಮಾ ದಾಳಿಯ ಬಳಿಕ ನಿತ್ಯವೂ ಇಮ್ರಾನ್ ಖಾನ್ ಗೆ ಇಮತಹ ಸಂದೇಶ ಕಳುಹಿಸುತ್ತಿದ್ದು, ಅದರಂತೆ ದಾಳಿಗೂ ಮುನ್ನಾ ದಿನ ಕೂಡ ಕಳುಹಿಸಿದ್ದಾಗಿ ತಿಳಿಸಿದ್ದಾನೆ.