ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊಚ್ಚಿಗೆ ಹಾರಲು ಏರ್ ಏಷ್ಯಾ ವಿಮಾನ ರೆಡಿಯಾಗಿ ನಿಂತಿತ್ತು. ಇದೇ ವಿಮಾನದಲ್ಲಿ ಅಲೆಪ್ಪಿಗೆ ತಮ್ಮ ನಿಶ್ಚಿತಾರ್ಥಕ್ಕೆ ತೆರಳಲು ಒಂದು ಜೋಡಿ ಕ್ಯಾಬ್'ನಲ್ಲಿ ಬರುತ್ತಿತ್ತು. ಆದರೆ ಸಮಯ ಮೀರಿದರೂ ಕೂಡ ವಿಮಾನ ಮಾತ್ರ ಟೇಕ್ ಆಫ್ ಆಗಲೇ ಇಲ್ಲ. ಯಾಕೆ  ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಬೆಂಗಳೂರು(ಫೆ.10): ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊಚ್ಚಿಗೆ ಹಾರಲು ಏರ್ ಏಷ್ಯಾ ವಿಮಾನ ರೆಡಿಯಾಗಿ ನಿಂತಿತ್ತು. ಇದೇ ವಿಮಾನದಲ್ಲಿ ಅಲೆಪ್ಪಿಗೆ ತಮ್ಮ ನಿಶ್ಚಿತಾರ್ಥಕ್ಕೆ ತೆರಳಲು ಒಂದು ಜೋಡಿ ಕ್ಯಾಬ್'ನಲ್ಲಿ ಬರುತ್ತಿತ್ತು. ಆದರೆ ಸಮಯ ಮೀರಿದರೂ ಕೂಡ ವಿಮಾನ ಮಾತ್ರ ಟೇಕ್ ಆಫ್ ಆಗಲೇ ಇಲ್ಲ. ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಆದರೆ ವಿಮಾನ ಟೇಕ್ ಅಫ್ ಆಗಬೇಕು ಎನ್ನುವಷ್ಟರಲ್ಲಿ ಕೆಂಪೇಗೌಡ ವಿಮಾನನಿಲ್ದಾಣದ ಕಚೇರಿಗೆ ಒಂದು ಫೋನ್ ಕರೆ ಬಂದಿದ್ದು, ಅದು ಬಾಂಬ್ ಬೆದರಿಕೆ ಕರೆಯಾಗಿತ್ತು. ಅಲರ್ಟಾದ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ, ಇಡೀ ಏರ್ ಏಷ್ಯಾ ವಿಮಾನ ತಡಕಾಡಿದರೂ ಬಾಂಬ್ ಸಿಕ್ಕಿಲ್ಲ. ಅಲ್ಲಿಗೆ ನಸುಕಿನ ಜಾವ ಮೂರುವರೆ ಗಂಟೆಯಾಗಿತ್ತು. ರಾತ್ರಿ 8.45ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ ನಸುಕಿನ ಜಾವ ಮೂರು ಗಂಟೆಗೆ ಟೇಕ್ ಅಫ್ ಆಗಿತ್ತು. ಆದರೆ, ಹುಸಿ ಬಾಂಬ್ ಕರೆ ನೀಡಿದವರು ಯಾರು ಎಂದು ಬೆನ್ನತ್ತಿದಾಗ ಸಿಕ್ಕಿದ್ದು ಇಂಟ್ರೆಸ್ಟಿಂಗ್ ವಿಚಾರ.

ಬೆದರಿಕೆ ಹಿಂದಿದೆ ‘ಎಂಗೇಜ್’ಮೆಂಟ್ ಸ್ಟೋರಿ

ಕೆಂಪೇಗೌಡ ಏರ್ ಪೋರ್ಟ್‌ಗೆ ಹಾಕಿದ್ದ ಬಾಂಬ್ ಬೆದರಿಕೆ ಹಿಂದಿನ ಸೀಕ್ರೆಟ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಇಂದು ಅಲೆಪ್ಪಿಯಲ್ಲಿ ಕೇರಳ ಮೂಲದ ನೇಹಾ ಗೋಪಿನಾಥನ್, ಅರ್ಜುನ್ ಎಂಗೇಜ್​​​ಮೆಂಟ್​​​​ ಇತ್ತು. ಕ್ಯಾಬ್​ ತಡವಾಗಿದ್ದರಿಂದ ವಿಮಾನ ಮಿಸ್ ಆಗಿಬಿಡುತ್ತದೋ ಎನ್ನುವ ಕಾರಣಕ್ಕೆ ಈ ಜೋಡಿ ಬಾಂಬ್ ಪ್ಲಾನ್ ರೂಪಿಸಿದೆ. ಕಾಯಿನ್ ಬಾಕ್ಸ್​'ನಿಂದ ಕರೆ ಮಾಡಿ ವಿಮಾನದಲ್ಲಿ ಬಾಂಬ್ ಇರುವುದಾಗಿ ಹೇಳಿದ್ದಾರೆ.

ವಿಮಾನ ತಪಾಸಣೆ ಕಾರ್ಯದಿಂದ ನಿಗದಿತ ಸಮಯಕ್ಕಿಂತ ತಡವಾಗಿ ಹೊರಟ ವಿಮಾನ ಏರಿದ ಜೋಡಿಯೇನೋ ಅಂದುಕೊಂಡಂತೆ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಆದರೆ, ಎಂಗೇಜ್ಮೆಂಟ್ ಆತುರದಲ್ಲಿ ಯಡವಟ್ಟು ಮಾಡಿಕೊಂಡ ಜೋಡಿ ಪೊಲೀಸರ ಅತಿಥಿಯಾಗಿದ್ದಾರೆ.