ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ನಟ-ನಟಿಯರ ಗಳಿಕೆ ಎಷ್ಟು ಎಂಬುದು ಬಹುತೇಕರಿಗೆ ಕುತೂಹಲವಿರುತ್ತದೆ.
ನವದೆಹಲಿ(ಮೇ.02): ಎಸ್.ಎಸ್. ರಾಜಾವೌಳಿ ನಿರ್ದೇಶನದ ‘ಬಾಹುಬಲಿ 2’ ಜಗತ್ತಿನಾದ್ಯಂತ ಅಭಿಮಾನಿಗಳಿಂದ ಹಿಡಿದು, ಚಿತ್ರರಂಗದ ದಿಗ್ಗಜರವರೆಗೂ ಭಾರೀ ಪ್ರಶಂಸೆಯನ್ನು ಗಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇಂಥ ಒಂದು ಅತ್ಯದ್ಭುತ ಜನಮನ ಗೆದ್ದ ‘ಬಾಹುಬಲಿ 2’ರ ಗಳಿಕೆ ಎಲ್ಲ ದಾಖಲೆಗಳನ್ನು ಮುರಿದಿದೆ. ಆದರೆ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ನಟ-ನಟಿಯರ ಗಳಿಕೆ ಎಷ್ಟು ಎಂಬುದು ಬಹುತೇಕರಿಗೆ ಕುತೂಹಲವಿರುತ್ತದೆ.
ವೆಬ್‌ವಾಹಿನಿಯೊಂದರ ವರದಿಯ ಪ್ರಕಾರ, ಚಿತ್ರದ ನಾಯಕ ನಟ, ಬಾಹುಬಲಿ ಪಾತ್ರಧಾರಿ ಪ್ರಭಾಸ್‌ಗೆ ಈ ಚಿತ್ರಕ್ಕಾಗಿ 25 ಕೋಟಿ ಸಂಭಾವನೆ ಪಾವತಿಸಲಾಗಿದೆ. ಬಲ್ಲಾಳ ದೇವ ಪಾತ್ರಧಾರಿ ರಾಣಾ ದಗ್ಗುಬಾಟಿ ಅವರಿಗೆ 15 ಕೋಟಿ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್‌ಗೆ 2 ಕೋಟಿ, ಶಿವಗಾಮಿ ಪಾತ್ರಕ್ಕಾಗಿ ರಮ್ಯಕೃಷ್ಣಾಗೆ 2.5 ಕೋಟಿ, ದೇವಸೇನಾ ಪಾತ್ರಧಾರಿ ಅನುಷ್ಕಾ ಶೆಟ್ಟಿಗೆ 5 ಕೋಟಿ, ಆವಂತಿಕಾ ಪಾತ್ರಧಾರಿ ತಮನ್ನಾ ಭಾಟಿಯಾಗೆ 5 ಕೋಟಿ ಸಂಭಾವನೆ ಪಾವತಿಸಲಾಗಿದೆ ಎಂದು ವರದಿ ತಿಳಿಸಿದೆ.
