ಬಿಗ್'ಬಾಸ್'ನ ಕಳೆದ ಸೀಜನ್'ನಲ್ಲಿ ಬಹುದೊಡ್ಡ ವಿವಾದವೊಂದನ್ನು ಸೃಷ್ಟಿಸಿದ್ದ 'ಹುಚ್ಚ' ವೆಂಕಟ್ ಬಿಗ್ ಹೌಸ್'ನಿಂದ ಹೊರಬಂದಿದ್ದರು. ಆದರೆ ಈ ಬಾರಿ ಮತ್ತೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 'ಹುಚ್ಚ' ವೆಂಕಟ್ ಮತ್ತೊಂದು ವಿವಾದವನ್ನು ಸೃಷ್ಟಿಸಿ ಒಂದೇ ದಿನಕ್ಕೆ ಬಿಗ್ ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ವೆಂಕಟ್ ಸೀಜನ್ -4ಕ್ಕೆ ಎಂಟ್ರಿ ಕೊಟ್ಟ ಒಂದೇ ದಿನದಲ್ಲಿ ಕಿಕ್ ಔಟ್ ಆಗಿದ್ದು ಏಕೆ? ಇಲ್ಲಿದೆ 'ಹುಚ್ಚ' ವೆಂಕಟ್ ಕೊಟ್ಟ ಎಕ್ಸ್ಲೂಸಿವ್ ಮಾಹಿತಿ

ಬೆಂಗಳೂರು(ನ.15): ಬಿಗ್'ಬಾಸ್'ನ ಕಳೆದ ಸೀಜನ್'ನಲ್ಲಿ ಬಹುದೊಡ್ಡ ವಿವಾದವೊಂದನ್ನು ಸೃಷ್ಟಿಸಿದ್ದ 'ಹುಚ್ಚ' ವೆಂಕಟ್ ಬಿಗ್ ಹೌಸ್'ನಿಂದ ಹೊರಬಂದಿದ್ದರು. ಆದರೆ ಈ ಬಾರಿ ಮತ್ತೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 'ಹುಚ್ಚ' ವೆಂಕಟ್ ಮತ್ತೊಂದು ವಿವಾದವನ್ನು ಸೃಷ್ಟಿಸಿ ಒಂದೇ ದಿನಕ್ಕೆ ಬಿಗ್ ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ವೆಂಕಟ್ ಸೀಜನ್ -4ಕ್ಕೆ ಎಂಟ್ರಿ ಕೊಟ್ಟ ಒಂದೇ ದಿನದಲ್ಲಿ ಕಿಕ್ ಔಟ್ ಆಗಿದ್ದು ಏಕೆ? ಇಲ್ಲಿದೆ 'ಹುಚ್ಚ' ವೆಂಕಟ್ ಕೊಟ್ಟ ಎಕ್ಸ್ಲೂಸಿವ್ ಮಾಹಿತಿ

ಕಳೆದ ಸೀಜನ್'ನಲ್ಲಿ ರವಿ ಮುರೂರು ಅವರ ಮೇಲೆ ಹಲ್ಲೆ ನಡೆಸಿದ್ದ 'ಹುಚ್ಚ' ವೆಂಕಟ್ ಬಿಗ್ ಹೌಸ್'ನಿಂದ ಎಲಿಮಿನೇಟ್ ಆಗದೆ ಹೊರಬಂದ ಮೊದಲ ವ್ಯಕ್ತಿಯಾಗಿದ್ದರು. ಆದರೆ ಈ ವಿವಾದ ಪ್ರತಿಯೊಬ್ಬರೂ ಬಿಗ್ ಬಾಸ್ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಈ ಬಾರಿಯೂ ಹುಚ್ಚ ವೆಂಕಟ್'ರನ್ನು ಬಿಗ್ ಬಾಸ್ ಮನೆಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ ಮತ್ತೆ ವೆಂಕಟ್'ಗೆ ಬಿಗ್ ಮನೆಗೆ ಎಂಟ್ರಿ ನೀಡಿದ್ದರು. ಈ ಬಾರಿಯೂ ಅಲ್ಲೊಂದು ಅಚಾತುರ್ಯ ನಡೆದಿದ್ದು, ಕೆರಳಿದ ಹುಚ್ಚ ವೆಂಕಟ್ ಸೀಜನ್4ರ ಸ್ಪರ್ಧಿ ಪ್ರಥಮ್'ಗೆ ರಕ್ತ ಬರುವಂತೆ ಹೊಡೆದು ಒಂದೇ ದಿನದಲ್ಲಿ ಕಿಕ್ ಔಟ್ ಆಗಿದ್ದಾರೆ. ಈ ಮೊದಲೇ ಇದಾದ ಬಳಿಕ ಸಂದರ್ಶನ ನೀಡಿದ ಹುಚ್ಚ ವೆಂಕಟ್ ಬಿಗ್ ಹೌಸ್'ನಲ್ಲಿ ನಡೆದ ಘಟನೆಯಲ್ಲಿ ಸಂಪೂರ್ಣವಾಗಿ ಬಿಚ್ಚಿಟ್ಟಿದ್ದಾರೆ.

ನಡೆದದ್ದೇನು?- ಹುಚ್ಚ ವೆಂಕಟ್ ಮಾತಿನಲ್ಲಿ

ಸ್ಪರ್ಧಿಗಳಿಗೆ ಟಾಸ್ಕ್'ವೊಂದಿತ್ತು. ಹೀಗಾಗಿ ಎರಡು ಮೂರು ಗಂಟೆಗಳಷ್ಟು ಸಮಯ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಅದಕ್ಕೂ ಮೊದಲು ನನಗೆ ಕೆಲವೊಂದು ಶರತ್ತುಗಳನ್ನು ವಿಧಿಸಿದ್ದು, ಯಾರ ಮೇಲೂ ಕೈ ಎತ್ತಬಾರದೆಂದು ಸೂಚಿಸಿದ್ದರು. ಅಲ್ಲಿ ನಾನು ಸುಳ್ಳು ಹೇಳಿದ್ದೆ, ಪ್ರಥಮ್'ಗೆ ಹೊಡೆಯಲೇಬೇಕು ಎಂಬ ಉದ್ದೇಶ ನನ್ನದಾಗಿತ್ತು. ಯಾಕೆಂದರೆ ಪ್ರಥಮ್'ಗೆ ಕರ್ನಾಟಕದ ಬಾವುಟ ಅಂದ್ರೆ ಏನು ಅಂತ ಗೊತ್ತಿಲ್ಲ. ಆತ ಹುಡುಗಿಯರ ಕೆಂಪು ಸ್ಕರ್ಟ್ ಧರಿಸಿ, ಹಳದಿ ಬಣ್ಣದ ಶರ್ಟ್ ಹಾಕಿ ಅದನ್ನು ಕರ್ನಾಟಕದ ಬಾವುಟ ಎಂದಿದ್ದ. ಆತನಿಗೆ ಬಾವುಟದ ಮಹತ್ವ ಗೊತ್ತಿಲ್ಲ' ಹೀಗಾಗಿ ನನಗೆ ಆತನ ಮೇಲೆ ಕೋಪ ಇತ್ತು' ಎಂದಿದ್ದಾರೆ.

ಇನ್ನು ಬಿಗ್ ಮನೆಯಲ್ಲಿ ನಡೆದ ಘಟನೆಯ ಕುರಿತಾಗಿ ತಿಳಿಸಿರುವ ವೆಂಕಟ್ ಬಿಗ್ 'ಮನೆಯಲ್ಲಿ ಸ್ಪರ್ಧಿಗಳಿಗೆ ನನ್ನನ್ನು ನೋಡಿದರೂ ನೋಡದಂತಿರಬೇಕು ಎಂಬ ಟಾಸ್ಕ್ ಕೊಟ್ಟಿದ್ದರು. ಈ ವೇಳೆ ನಾನು ಸಂಜನಾ ಅವರಿಗೆ ನೀನು ಇಂತಹ ಬಟ್ಟೆ ಧರಿಸಬೇಡಿ ಎಂದು ತಿಳಿಸಿದೆ. ವೀಕ್ಷಕರಿಗೆ ಕೆಟ್ಟ ಸಂದೇಶ ಹೋಗುತ್ತದೆ. ಇದೇ ವಿಚಾರವಾಗಿ ಕಾರುಣ್ಯ ಅವರಿಗೂ ಬೈದಿದ್ದೆ. ಈ ಸಂದರ್ಭದಲ್ಲಿ ನನ್ನ ಮೇಲಿನ ಕೋಪದಿಂದ ಪ್ರಥಮ್ ಮನೆಯಲ್ಲಿರುವ ಹುಡುಗಿಯರಿಗೆ ಆವಾಜ್ ಹಾಕಿದ. ಇನ್ನು ನಿರಂಜನ್ ವಿಚಾರವಾಗಿಯೂ ಅವಶ್ಯಕತೆ ಇಲ್ಲದ ಮಾತುಗಳನ್ನಾಡಿದ್ದ. ಇಷ್ಟೇ ಅಲ್ಲದೆ ಒಂದು ಹಾಡು ಹಾಡುವ ಮೂಲಕ ನನ್ನನ್ನೂ ರೇಗಿಸಿದ. ಹೀಗಾಗಿ ನಾನು ಅವನ ಮೇಲೆ ರೇಗಾಡಿ ಹೊಡೆದೆ. ಮನೆಗೆ ಎಂಟ್ರಿ ಕೊಡುವ ಮೊದಲು ಯಾರ ಮೇಲೂ ಕೈ ಎತ್ತಬಾರದೆಂಬ ಶರತ್ತು ವಿಧಿಸಿದ್ದರು. ಆದರೆ ಪ್ರಥಮ್ ನನ್ನನ್ನು ಹೀಗೆ ಮಾಡುವಂತೆ ಪ್ರೇರೇಪಿಸಿದ. ಇದೆಲ್ಲಾ ನಾನು ಟಂಟ್ರಿ ಕೊಟ್ಟ 20 ನಿಮಿಷಗಳಲ್ಲೇ ನಡೆದು ಹೋಗಿತ್ತು' ಎಂದಿದ್ದಾರೆ.