ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೂ ಗುಜರಾತ್ ಗೂ ಅವಿನಾಭಾವ ಸಂಬಂಧ. ಕಟ್ಟಾ ಹಿಂದೂವಾದಿಗಳೆಂದು ಹೆಸರಾಗಿರುವ ಆದಿತ್ಯನಾಥರಿಗೆ ದೀಕ್ಷೆ ನೀಡಿದ ಗುರುಗಳಾರೆಂದು ತಿಳಿದರೆ ನಿಮಗೆ ಆಶ್ವರ್ಯವಾದೀತು!

ಅಹ್ಮದಾಬಾದ್ (ಮಾ.28): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೂ ಗುಜರಾತ್ ಗೂ ಅವಿನಾಭಾವ ಸಂಬಂಧ. ಕಟ್ಟಾ ಹಿಂದೂವಾದಿಗಳೆಂದು ಹೆಸರಾಗಿರುವ ಆದಿತ್ಯನಾಥರಿಗೆ ದೀಕ್ಷೆ ನೀಡಿದ ಗುರುಗಳಾರೆಂದು ತಿಳಿದರೆ ನಿಮಗೆ ಆಶ್ವರ್ಯವಾದೀತು! ಗುಜರಾತ್ ನ ವಿಸ್ನಾಗರ್ ದಲ್ಲಿರುವ ನಾಥ್ ಸಂಪ್ರದಾಯ ಮಠದ ಹಿಂದಿನ ಗುರುಗಳಾದ ಗುಲಾಬ್ ನಾಥ್ ಬಾಪು ಯೋಗಿ ಆದಿತ್ಯನಾಥರ ಧಾರ್ಮಿಕ ಗುರು. ಆಶ್ಚರ್ಯಕರ ವಿಚಾರ ಅಂದ್ರೆ ಇವರು ಹುಟ್ಟು ಮುಸ್ಲೀಂರಾಗಿದ್ದು, ಹಿಂದೂ ತೀವ್ರವಾದಿ ಎಂದೇ ಗುರುತಿಸಿಕೊಂಡಿದ್ದಾರೆ.

ಗುಲಾಬ್ ನಾಥ್ ಬಾಪುರವರ ಮೂಲ ಹೆಸರು ಗುಲ್ ಮಹಮ್ಮದ್ ಪಠಾಣ್. ಅವೈದ್ಯನಾಥ್ ಮತ್ತು ಆದಿತ್ಯನಾಥ್ ಇಬ್ಬರೂ ಗುಲಾಬ್ ನಾಥ್ ಬಾಪುರವರ ಶಿಷ್ಯರು. ಅವರೀರ್ವರ ಸಂಬಂಧ ಬಹಳ ಗಾಢವಾಗಿತ್ತು. 86 ನೇ ವಯಸ್ಸಿನಲ್ಲಿ ಗುಲಾಬ್ ನಾಥ್ ವಿಧಿವಶರಾದಾಗ ಆದಿತ್ಯನಾಥರೇ ಕ್ರಿಯಾವಿಧಿಗಳನ್ನು ಪೂರೈಸಿದ್ದರು.

ವರ್ಷಕ್ಕೆ ಎರಡ್ಮೂರು ಬಾರಿ ಆದಿತ್ಯನಾಥ್ ವಿಸ್ನಾಗರ್ ನಲ್ಲಿರುವ ಮಠಕ್ಕೆ ಭೇಟಿ ನೀಡುತ್ತಾರೆ. ಯೋಗಿಯವರ ಗುಜರಾತಿನ ಭೇಟಿ ವಿಸ್ನಾಗರ್ ನಿಂದಲೇ ಪ್ರಾರಂಭವಾಗಲಿದೆ.

ವರದಿ :ಟೈಮ್ಸ್ ಆಫ್ ಇಂಡಿಯಾ