ನವದೆಹಲಿ (ಸೆ.01): ದೇಶದ ಅತ್ಯಂತ 100 ಪ್ರಭಾವಶಾಲಿ ನಾಯಕರ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ 100 ಪ್ರಭಾವಿಗಳಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ.

ವಿಶೇಷವೆಂದರೆ ‘ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಟಾಪ್‌ 10 ಪ್ರಭಾವಿಗಳಲ್ಲಿ 3ನೇ ಸ್ಥಾನದಲ್ಲಿರುವ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು 5ನೇ ಸ್ಥಾನದಲ್ಲಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಹೊರತುಪಡಿಸಿದರೆ ಉಳಿದ 8 ಜನ ಬಿಜೆಪಿ ಇಲ್ಲವೇ ಸಂಘ ಪರಿವಾರಕ್ಕೆ ಸೇರಿದವರಾಗಿದ್ದಾರೆ. ಇನ್ನು ಪ್ರಮುಖ ವಿಪಕ್ಷ ಕಾಂಗ್ರೆಸ್‌ನ ಪೈಕಿ ಟಾಪ್‌ 20ರೊಳಗೆ ಸ್ಥಾನ ಪಡೆದ ಇಬ್ಬರೇ ಇಬ್ಬರು ನಾಯಕರೆಂದರೆ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ಸಿಂಗ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿವಿಧ ರಾಜ್ಯಗಳಲ್ಲಿನ ಸ್ಥಳೀಯ ಪಕ್ಷಗಳ ನಾಯಕರ ರಾರ‍ಯಂಕಿಂಗ್‌ನಲ್ಲಿ ಭಾರೀ ಇಳಿಕೆಯಾಗಿದೆ. ಆದರೆ ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು, ದೊಡ್ಡ ದೊಡ್ಡ ನಾಯಕರಿಗಿಂತಲೂ ಟಾಪ್‌ ಸ್ಥಾನದಲ್ಲಿದ್ದಾರೆ.

ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ 21, ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ 25, ಉದ್ಯಮಿ ಅದಾನಿ 28, ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ 30, ಪ್ರಿಯಾಂಕಾ ವಾದ್ರಾ 34, ವಿರಾಟ್‌ ಕೊಹ್ಲಿ 52, ಸ್ಮೃತಿ ಇರಾನಿ 55, ಅಮಿತಾಭ್‌ ಬಚ್ಚನ್‌ 57, ಪಿ.ವಿ.ಸಿಂಧು 90, ನಟ ಅಕ್ಷಯ್‌ಕುಮಾರ್‌ 93, ಸಲ್ಮಾನ್‌ ಖಾನ್‌ 96, ಶಾರುಖ್‌ ಖಾನ್‌ 98, ದೀಪಿಕಾ ಪಡುಕೋಣೆ 100 ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರು.

ಟಾಪ್‌ 10 ನಾಯಕರು

1. ನರೇಂದ್ರ ಮೋದಿ

2. ಅಮಿತ್‌ ಶಾ

3. ರಂಜನ್‌ ಗೊಗೋಯ್‌

4. ಮೋಹನ್‌ ಭಾಗವತ್‌

5. ಮುಕೇಶ್‌ ಅಂಬಾನಿ

6. ರಾಜ್‌ನಾಥ್‌ಸಿಂಗ್‌

7. ಅಜಿತ್‌ ಧೋವಲ್‌

8. ನಿರ್ಮಲಾ ಸೀತಾರಾಮನ್‌

9. ನಿತಿನ್‌ ಗಡ್ಕರಿ

10. ಜೆ.ಪಿ.ನಡ್ಡಾ

ಪಟ್ಟಿಯಲ್ಲಿನ ಟಾಪ್‌ ಕನ್ನಡಿಗರು

16. ಬಿ.ಎಲ್‌.ಸಂತೋಷ್‌

42. ಬಿ.ಎಸ್‌.ಯಡಿಯೂರಪ್ಪ

65. ಅಜೀಂ ಪ್ರೇಮ್‌ಜೀ

68. ಶ್ರೀ ಶ್ರೀ ರವಿಶಂಕರ್‌ ಗುರೂಜಿ

84. ಸಿದ್ದರಾಮಯ್ಯ