‘ನಿನ್ನಿಂದ ಮಾತ್ರ ಸಾಧ್ಯ’: ಗೌರಿ ಕೊಲ್ಲಲು ವಾಗ್ಮೋರೆ ಬ್ರೈನ್ ವಾಶ್ ಮಾಡಿದ್ಯಾರು?

The Man who Brain washed Parashuram Vagmore to Kill Gouri Lankesh
Highlights

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ

ಗೌರಿ ಲಂಕೇಶ್ ಕೋಲ್ಲುವಂತೆ ಶೂಟರ್ ಪರುಶರಾಮ್ ಗೆ ಹೇಳಿದ್ದು ಯಾರು ಗೋತ್ತಾ? 

ಆತನ ಮಾತು ಕೇಳಿ ಗೌರಿ ಲಂಕೇಶ್ ಗೆ ಗುಂಡಿಟ್ಟು ಕೊಂದ ಶೂಟರ್ ಪರುಶರಾಮ್ 

ಗೌರಿ ಲಂಕೇಶ್ ಕೋಲ್ಲುವಂತೆ  ಪರುಶರಾಮ್ ಬ್ರೈನ್ ವಾಶ್ ಮಾಡಿದ್ದ ಪ್ರವೀಣ್  ಅ

ಶಿಕಾರಿಪುರಿ ಮೂಲದ ಬಂಧಿತ ಆರೋಪಿ ಪ್ರವೀಣ್ ಅಲಿಯಾಸ್ ಸುಜೀತ್ 

ಬೆಂಗಳೂರು(ಜೂ.15): ಮಹತ್ವದ ಬೆಳವಣಿಗೆಯೊಂದರಲ್ಲಿ ಗೌರಿ ಲಂಕೇಶ್ ಹತ್ಯೆಗೆ ತನ್ನನ್ನು ಉತ್ತೇಜಿಸಿದವನ ಹೆಸರನ್ನು ಆರೋಪಿ ಪರುಶರಾಮ್ ವಾಗ್ಮೋರೆ ಬಾಯ್ಬಿಟ್ಟಿದ್ದಾನೆ.

ಇಂದು ಎಸ್‌ಐಟಿ ವಿಚಾರಣೆ ಸಂದರ್ಭದಲ್ಲಿ ಹಲವಾರು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿರುವ ಪರುಶರಾಮ್, ಗೌರಿಯನ್ನು ಕೊಲ್ಲಲು ಮತ್ತೋರ್ವ ಬಂಧಿತ ಆರೋಪಿ ಪ್ರವೀಣ್ ಅಲಿಯಾಸ್ ಸುಜೀತ್ ತನ್ನನ್ನು ಉತ್ತೇಜಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಗೌರಿ ಲಂಕೇಶ್ ಕೋಲ್ಲುವಂತೆ ಶೂಟರ್ ಪರುಶರಾಮ್ ಬ್ರೈನ್ ವಾಶ್ ಮಾಡಿದ್ದೇ ಪ್ರವೀಣ್ ಎಂದು ಇದೀಗ ಪೊಲೀಸರು ತಿಳಿಸಿದ್ದಾರೆ. 

4 ವರ್ಷಗಳ ಹಿಂದೆ ಪರುಶರಾಮ್ ವಾಗ್ಮೋರೆಯನ್ನು ಭೇಟಿ ಮಾಡಿದ್ದ ಪ್ರವೀಣ್, ನಂತರ ಸಿಂಧಗಿಗೆ ತೆರಳಿ ಆತನನ್ನು ಭೇಟಿ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. 2012 ರಲ್ಲಿ ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಾಟದ ಪ್ರಕರಣದಲ್ಲಿ ಪರುಶರಾಮ್ ಜೈಲು ಸೇರಿದ್ದ. ಆತ ಹೊರಬಂದ ಬಳಿಕ ಪ್ರವೀನ್ ಆತನನ್ನು ಭೇಟಿ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡುವ ಕುರಿತು ಇಬ್ಬರೂ ಚರ್ಚಿಸಿದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಗೌರಿ ಹತ್ಯೆಯನ್ನು ಕೇವಲ ನಿನ್ನಿಂದ ಮಾತ್ರ ಮಾಡಲು ಸಾಧ್ಯ ಎಂದು ಪ್ರವೀಣ್ ಪರುಶರಾಮ್ ವಾಗ್ಮೋರೆಗೆ ನಂಬಿಸಲು ಪ್ರಯತ್ನಿಸಿದ್ದ. ಆದರೆ ಈ ಕುರಿತು ಕೂಡಲೇ ನಿರ್ಧಾರಕ್ಕೆ ಬರಲಾಗದ ವಾಗ್ಮೋರೆ, ಸಮಯಾವಕಾಶ ಕೊಡಲು ಕೇಳಿದ್ದ ಎನ್ನಲಾಗಿದೆ. ಕೊನೆಯಲ್ಲಿ ಪ್ರವೀಣ್ ಆಹ್ವಾನವನ್ನು ಒಪ್ಪಿಕೊಂಡ ವಾಗ್ಮೋರೆ ಗೌರಿ ಹತ್ಯೆ ಸಂಚಿನಲ್ಲಿ ಭಾಗಿಯಾದ ಎಂಬುದು ತಿಳಿದು ಬಂದಿದೆ.  

loader