ಅನುಷ್ಕಾ ಶರ್ಮ ಬೈದಿದ್ದ ಯುವಕ ಬಾಲನಟಶಾರೂಖ್ ಖಾನ್ ಜೊತೆ ನಟಿಸಿದ್ದ ಅರ್ಹಾನ್‘ಇಂಗ್ಲಿಷ್ ಬಾಬು ದೇಸಿ ಮೇಮ್’ ಎಂಬ ಚಿತ್ರದಲ್ಲಿ ನಟನೆಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್

ಮುಂಬೈ(ಜೂ.19): ರಸ್ತೆಯಲ್ಲಿ ಪ್ಲಾಸ್ಟಿಕ್ ಕಸ ಚೆಲ್ಲಿದ ಯುವಕನಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮ ಬೈದಿದ್ದು ಎಲ್ಲರಿಗೂ ಗೊತ್ತೇ ಇದೆ. ಪತಿ ವಿರಾಟ್ ಕೊಹ್ಲಿ ಈ ವಿಡಿಯೋವನ್ನು ಶೆರ್ ಮಾಡಿದ್ದೇ ತಡ ವಾದ ವಿವಾದಗಳು ನಿರಂತರವಾಗಿ ಜರುಗುತ್ತಲೇ ಇವೆ. ಇನ್ನು ಅನುಷ್ಕಾ ಅವರಿಂದ ಸ್ವಚ್ಛತೆಯ ಪಾಠ ಹೇಳಿಸಿಕೊಂಡಿದ್ದ ಯುವಕ ಬಾಲನಟ ಎಂಬುದು ಇದೀಗ ಗೊತ್ತಾಗಿರುವ ಸಂಗತಿ.

View post on Instagram

ಹೌದು, ಕಾರಿನಿಂದ ಪ್ಲಾಸ್ಟಿಕ್ ಕಸ ಹೊರ ಚೆಲ್ಲಿ ಅನುಷ್ಕಾ ಶರ್ಮ ಕೆಂಗೆಣ್ಣಿಗೆ ಗುರಿಯಾಗಿದ್ದ ಯುವಕ ಅರ್ಹಾನ್ ಸಿಂಗ್, ಈ ಹಿಂದೆ ಬಾಲನಟರಾಗಿದ್ದರು. ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಜೊತೆ ಅರ್ಹಾನ್ ಬಾಲನಟರಾಗಿ ನಟಿಸಿದ್ದಾರೆ. 1996 ರಲ್ಲಿ ತೆರೆ ಕಂಡಿದ್ದ ‘ಇಂಗ್ಲಿಷ್ ಬಾಬು ದೇಸಿ ಮೇಮ್’ ಎಂಬ ಚಿತ್ರದಲ್ಲಿ ಅರ್ಹಾನ್ ಬಾಲ ನಟರಾಗಿ ನಟಿಸಿದ್ದಾರೆ.

ಇಷ್ಟೇ ಅಲ್ಲದೇ 90 ರ ದಶಕದ ಪ್ರಸಿದ್ದ ಟಿವಿ ಶೋ ‘ದೇಖ್ ಭಾಯಿ ದೇಖ್’ ನಲ್ಲೂ ಅರ್ಹಾನ್ ನಟಿಸಿದ್ದಾರಂತೆ. ತೀರ ಇತ್ತಿಚೀಗೆ ನಟ ಶಾಹೀದ್ ಕಪೂರ್ ಅವರ ‘ಪಾಠಶಾಲಾ’ ಚಿತ್ರದಲ್ಲೂ ಅರ್ಹಾನ್ ಸಹ ಕಲಾವಿದನಾಗಿ ಅಭಿನಯಿಸಿದ್ದಾರೆ ಎಂಬುದು ವಿಶೇಷ.

ಈ ಕುರಿತು ಖುದ್ದು ಮಾಹಿತಿ ನೀಡಿರುವ ಅರ್ಹಾನ್, ತಾವು ಬಾಲ ನಟರಾಗಿ ನಟಿಸಿದ ಚಿತ್ರಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.