ಪಠಾಣ್'ಕೋಟ್'ನ ಬಾಲಕಿಯೊಬ್ಬಳಿಗೆ ರೇಪಿಸ್ಟ್ ಮೇಲೆ ಅದೆಷ್ಟು ಪ್ರೀತಿ ಹೆಚ್ಚಾಯಿತೆಂದರೆ ಆಕೆಗೆ ತನ್ನ ತಂದೆ ತಾಯಿಯೇ ಶತ್ರುಗಳಾದರು. ಅತ್ಯಾಚಾರಿಯೊಡನೆ ಮದುವೆ ಮಾಡಿಕೊಡಲು ತಂದೆ ತಾಯಿ ಒಪ್ಪಲಿಲ್ಲವೆಂಬ ಒಂದೇ ಕಾರಣಕ್ಕೆ ಅಪ್ರಾಪ್ತ ಬಾಲಕಿ ತನ್ನ ಹೆತ್ತವರಿಗೆ ವಿಷವುಣಿಸಿದ್ದಾಳೆ. ಸದ್ಯ ಪೋಷಕರ ಸ್ಥಿತಿ ಗಂಭೀರವಾಗಿದೆ.

ಪಂಜಾಬ್(ಜ.02): ಪಠಾಣ್'ಕೋಟ್'ನ ಬಾಲಕಿಯೊಬ್ಬಳಿಗೆ ರೇಪಿಸ್ಟ್ ಮೇಲೆ ಅದೆಷ್ಟು ಪ್ರೀತಿ ಹೆಚ್ಚಾಯಿತೆಂದರೆ ಆಕೆಗೆ ತನ್ನ ತಂದೆ ತಾಯಿಯೇ ಶತ್ರುಗಳಾದರು. ಅತ್ಯಾಚಾರಿಯೊಡನೆ ಮದುವೆ ಮಾಡಿಕೊಡಲು ತಂದೆ ತಾಯಿ ಒಪ್ಪಲಿಲ್ಲವೆಂಬ ಒಂದೇ ಕಾರಣಕ್ಕೆ ಅಪ್ರಾಪ್ತ ಬಾಲಕಿ ತನ್ನ ಹೆತ್ತವರಿಗೆ ವಿಷವುಣಿಸಿದ್ದಾಳೆ. ಸದ್ಯ ಪೋಷಕರ ಸ್ಥಿತಿ ಗಂಭೀರವಾಗಿದೆ.

ಲಭ್ಯವಾದ ಮಾಹಿತಿ ಅನ್ವಯ ಬಹರಾಂಪುರ ಇಲಾಖೆಯ ಓರ್ವ ಅಪ್ರಾಪ್ತ ಬಾಲಕಿ ತನ್ನ ಪ್ರಿಯತಮನೊಂದಿಗೆ ಕೈ ಮಿಲಾಯಿಸಿ ತನ್ನ ತಂದೆ ತಾಯಿಗೇ ವಿಷವುಣಿಸಿ, ಕೊಲೆಗೈಯ್ಯಲು ಯತ್ನಿಸಿದ್ದಾಳೆ. ಈಕೆಯ ಹೆತ್ತವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಅವರ ಪರಿಸ್ಥಿತಿ ಅಪಾಯದಿಂದ ಹೊರಗಿದೆ.

ಕಳೆದ ಆರು ತಿಂದಗಳ ಹಿಂದೆ ದಲೀಪ್ ಸಿಂಗ್ ಹೆಸರಿನ ಈ ಯುವಕ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದಿದ್ದ. ಈ ಕುರಿತಾಗಿ ಈತನ ವಿರುದ್ಧ ಪೊಲೀಸರಿಗೂ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿತ್ತು. ಆದರೆ ಇದಾದ ಬಳಿಕ ಆ ಬಾಲಕಿಗೆ ತನ್ನನ್ನು ಅತ್ಯಾಚಾರಗೈದ ಯುವಕನ ಮೇಲೆ ಪ್ರೀತಿ ಹುಟ್ಟಿಕೊಂಡಿದೆ, ಇದೇ ವೇಳೆ ತಮ್ಮಿಬ್ಬರ ಪ್ರೀತಿಗೆ ತನ್ನ ಹೆತ್ತವರು ವಿರೋಧ ವ್ಯಕ್ತಪಡಿಸಬಹುದು ಎಂಬ ಅನುಮಾನವೂ ಆಕೆಗೆ ಕಾಡಲಾರಂಭಿಸಿತ್ತು. ಹೀಗಾಗಿ ಬಾಲಕಿ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ತಂದೆ ತಾಯಿಯ ಆಹಾರದಲ್ಲಿ ವಿಷ ಬೆರೆಸಿ ಕೊಲೆಗೈಯ್ಯಲು ಯತ್ನಿಸಿದ್ದಾಳೆ.

ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ತಂದೆ ಈ ಕುರಿತಾಗಿ ಮಾತನಾಡಿ 'ನನ್ನ ಮಗಳು ಈ ಇಲಾಖೆಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾಳೆ. ಶಾಲೆಗೆ ಹೋಗುವ ಸಂದರ್ಭದಲ್ಲಿ ಆಕೆಗೆ ದಲೀಪ್'ನ ಪರಿಚಯವಾಗಿದೆ. ಆದರೆ ದಲೀಪ್ ಓರ್ವ ಕುಡುಕನಾಗಿದ್ದ ವಿಚಾರ ತಂದೆ ತಾಯಿಗೆ ತಿಳಿದಿತ್ತು. ಹೀಗಾಗಿ ಮಗಳು ಹಾಳಾಗಬಾರದೆಂದು ಆಕೆಯನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಆದರೆ ಸುಮ್ಮನಾಗದ ದಲೀಪ್ 2016ರ ಮೇ ತಿಂಗಳಲ್ಲಿ ಬಾಲಕಿಯನ್ನು ಅತ್ಯಾಚಾರಗೈದಿದ್ದ. ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು ಆದರೆ ಯುವಕ ಮಾತ್ರ ನಾಪತ್ತೆಯಾಗಿದ್ದ.

ಇದಾದ ಬಳಿಕ ಕೆಲವೇ ದಿನಗಳ ಹಿಂದೆ ಈ ಯುವಕ ಬಾಲಕಿಗೆ ಮೊಬೈಲ್ ಫೋನ್'ನ್ನು ಕೊಡಿಸಿದ್ದ. ಮಗಳ ಬಳಿ ಮೊಬೈಲ್ ನೋಡಿದ ತಂದೆ ಪರಿಶೀಲಿಸಲು ಕೇಳಿದ್ದ. ಈ ವೇಳೆ ಮಗಳು ಮೊಬೈಲ್'ನ್ನು ಒಡೆದು ಹಾಕಿದ್ದಳು. ಆದರೆ ಬೆಂಬಿಡದ ದಲೀಪ್ ಆಕೆಗೆ ಮತ್ತೊಂದು ಮೊಬೈಲ್ ಕೊಡಿಸಿದ್ದ' ಎಂದಿದ್ದಾರೆ.

ಇನ್ನು ತನ್ನ ಮಗು ಹಾಗೂ ದಲೀಪ್ ಇಬ್ಬರೂ ಸೇರಿ ತಮಗೆ ವಿಷ ನೀಡಿದ್ದಾರೆ ಎಂದು ಹೆತ್ತವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಇದನ್ನು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆದರೆ ಆರೋಪಿಗಳಿಬ್ಬರೂ ನಾಪತ್ತೆಯಾಗಿದ್ದಾರೆ.