ಅಸಲಿಗೆ ಬಿಡುಗಡೆ ಆಗಿರೋ ರಾಸಲೀಲೆ ಸಿಡಿಯಲ್ಲಿರುವ ಮಹಿಳೆ ಯಾರು? ಈ ಪ್ರಶ್ನೆಗೆ ಉತ್ತರ ಬಾಗಲಕೋಟೆ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಪ್ಲ್ಯಾನ್ ಹಿಂದೆ ಮಹಿಳೆ ಮತ್ತು ಪೋಲಿಸ್ ಪೇದೆಯ ಕೈವಾಡವಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾಕೆಂದರೆ ಈ ಸಿಡಿ ಬಿಡುಗಡೆ ವಿಷಯದಲ್ಲಿ ಮೊದಲು ಬಂದವನು ಸುಭಾಷ್ ಮುಗಳಖೋಡ. ಇವುಗಳ ಮಧ್ಯೆ ಪರಿಚಯವಾದ ಮಹಿಳೆ ವಿಜಯಲಕ್ಷ್ಮೀ. ಈ ವಿಜಯಲಕ್ಷ್ಮೀ ಸಚಿವರ ರಾಸಲೀಲೆ ಕುರಿತು ಕಳೆದ ಕೆಲ ದಿನಗಳ ಹಿಂದೆಯೇ ಬಿಡುಗಡೆಯಾದ ವೀಡಿಯೋ ಹೇಳಿಕೆ ನನ್ನದೇ ಎಂದ ಬಳಿಕ ನನ್ನ ಹೇಳಿಕೆ ಅಲ್ಲ ಎಂದು ಗೊಂದಲ ಹುಟ್ಟಿಸಿದ್ದರು. ಅಷ್ಟೇ ಅಲ್ಲದೆ ಮೇಟಿಯವರು ಅಜ್ಜನ ಸಮಾನ ಎಂದಿದ್ದರು. ಆದರೆ ನಿನ್ನೆ ಸಚಿವರ ರಾಸಲೀಲೆ ಸಿಡಿ ಬಿಡುಗಡೆಯಾದ ಬಳಿಕ ವಿಜಯಲಕ್ಷ್ಮಿ ಸುಳಿವೇ ಇಲ್ಲ.
ಬೆಂಗಳೂರು(ಡಿ.15): ಮಾಜಿ ಸಚಿವ ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಸಿಡಿ ಬಿಡುಗಡೆ ಆಗುವ ಮುನ್ನ ವಿಡಿಯೋದಲ್ಲಿದ್ದ ಮಹಿಳೆ ನಾನೇ ಎಂದು ಹೇಳಿಕೊಂಡಿದ್ದ ವಿಜಯಲಕ್ಷಿ ಕ್ಷಣಕ್ಕೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದರು. ಸದ್ಯ ವಿಜಯಲಕ್ಷ್ಮೀ ಹಾಗೂ ಪೇದೆ ಸುಭಾಷ್ ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಇದರಿಂದಾಗಿ ಈಗ ಸೆಕ್ಸ್ ಸಿಡಿಯಲ್ಲಿ ಇರುವ ಮಹಿಳೆ ಯಾರು ಎಂಬ ಪ್ರಶ್ನೆ ಮೂಡಿದೆ.
ಎಚ್.ವೈ ಮೇಟಿ ರಾಸಲೀಲೆ ಸಿಡಿ ರಿಲೀಸ್: ಗೊಂದಲದ ಹೇಳಿಕೆ ನೀಡಿದ್ದ ವಿಜಯಲಕ್ಷ್ಮಿ ಎಲ್ಲಿ?
ನಿನ್ನೆ ಎಚ್.ವೈ ಮೇಟಿ ರಾಸಲೀಲೆ ಸಿಡಿ ಸ್ಪೋಟಗೊಳ್ಳುವ ಮೂಲಕ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ವಿಷಯ ಏನಪ್ಪ ಅಂದರೆ ಮಂಗಳವಾರದವರೆಗೂ ರಾಸಲೀಲೆ ಸಿಡಿ ಬಗ್ಗೆ ಮಾತನ್ನಾಡುತ್ತಿದ್ದ ವಿಜಯ ಲಕ್ಷ್ಮಿ ಸಿಡಿ ಬಿಡುಗಡೆಯಾದ ಬಳಿಕ ಪತ್ತೆಯೇ ಇಲ್ಲ ಜೊತೆಗೆ ಆಕೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ವಿಡಿಯೋದಲ್ಲಿ ಮೇಟಿ ಜೊತೆ ಇರೋ ಮಹಿಳೆ ಯಾರು?
ಅಸಲಿಗೆ ಬಿಡುಗಡೆ ಆಗಿರೋ ರಾಸಲೀಲೆ ಸಿಡಿಯಲ್ಲಿರುವ ಮಹಿಳೆ ಯಾರು? ಈ ಪ್ರಶ್ನೆಗೆ ಉತ್ತರ ಬಾಗಲಕೋಟೆ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಪ್ಲ್ಯಾನ್ ಹಿಂದೆ ಮಹಿಳೆ ಮತ್ತು ಪೋಲಿಸ್ ಪೇದೆಯ ಕೈವಾಡವಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾಕೆಂದರೆ ಈ ಸಿಡಿ ಬಿಡುಗಡೆ ವಿಷಯದಲ್ಲಿ ಮೊದಲು ಬಂದವನು ಸುಭಾಷ್ ಮುಗಳಖೋಡ. ಇವುಗಳ ಮಧ್ಯೆ ಪರಿಚಯವಾದ ಮಹಿಳೆ ವಿಜಯಲಕ್ಷ್ಮೀ..
ಈ ವಿಜಯಲಕ್ಷ್ಮೀ ಸಚಿವರ ರಾಸಲೀಲೆ ಕುರಿತು ಕಳೆದ ಕೆಲ ದಿನಗಳ ಹಿಂದೆಯೇ ಬಿಡುಗಡೆಯಾದ ವೀಡಿಯೋ ಹೇಳಿಕೆ ನನ್ನದೇ ಎಂದ ಬಳಿಕ ನನ್ನ ಹೇಳಿಕೆ ಅಲ್ಲ ಎಂದು ಗೊಂದಲ ಹುಟ್ಟಿಸಿದ್ದರು. ಅಷ್ಟೇ ಅಲ್ಲದೆ ಮೇಟಿಯವರು ಅಜ್ಜನ ಸಮಾನ ಎಂದಿದ್ದರು. ಆದರೆ ನಿನ್ನೆ ಸಚಿವರ ರಾಸಲೀಲೆ ಸಿಡಿ ಬಿಡುಗಡೆಯಾದ ಬಳಿಕ ವಿಜಯಲಕ್ಷ್ಮಿ ಸುಳಿವೇ ಇಲ್ಲ.
ಇನ್ನೂ ಪೇದೆ ಸುಭಾಷ್ ಕೂಡ ಸಿಡಿ ಬಿಡುಗಡೆಯಾದ ಬಳಿಕ ಯಾವುದೇ ರೀತಿ ಪ್ರತಿಕ್ರಿಯೆ ಕೊಟ್ಟಿಲ್ಲ. ಇನ್ನೊಂದೆಡೆ ಸಚಿವರ ತವರು ಜಿಲ್ಲೆಯಲ್ಲಿ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಸೀಡಿಯಲ್ಲಿರುವ ಮಹಿಳೆ ಯಾರು, ಈ ಪ್ರಕರಣ ಹಿಂದೆ ಯಾರ್ಯಾರಿದ್ದಾರೆ, ವಿಜಯಲಕ್ಷ್ಮೀ ಗೆ ಈ ಪ್ರಕರಣದ ಬಗ್ಗೆ ಇರುವ ನಿಜವಾದ ಸಂಬಂಧ ಏನು ಹಾಗೂ ಸಿಡಿ ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ.
