ಈಗಿನ ಯಂಗ್ ಜನರೇಷನವರಿಗೆ ಬಾಡಿ ಬಿಲ್ಡ್ ಮಾಡ್ಬೇಕು, ಸಿಕ್ಸ್ ಪ್ಯಾಕ್ , 8 ಪ್ಯಾಕ್ ಮಾಡಿಕೊಂಡು ಜಾಲಿಯಾಗಿ ಇರಬೇಕು ಎನ್ನುವ ಆಸೆ ಇರುವುದು ಸಾಮಾನ್ಯ. ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡಿಕೊಳ್ಳಿ ಪರ್ವಾಗಿಲ್ಲಾ, ಆದರೆ ಆದೇ ದೇಹ ದಂಡನೆ ದೇಹಕ್ಕೆ ಮಾರಕವಾದರೆ?. ಸಿಕ್ಸ್ 'ಪ್ಯಾಕ್ ಗೀಳು ಯುವಕನೊಬ್ಬನ ಪ್ರಾಣಕ್ಕೇ ಕುತ್ತಾಗಿದೆ.

ಬೆಂಗಳೂರು(ಮಾ.07): ಈಗಿನ ಯಂಗ್ ಜನರೇಷನವರಿಗೆ ಬಾಡಿ ಬಿಲ್ಡ್ ಮಾಡ್ಬೇಕು, ಸಿಕ್ಸ್ ಪ್ಯಾಕ್ , 8 ಪ್ಯಾಕ್ ಮಾಡಿಕೊಂಡು ಜಾಲಿಯಾಗಿ ಇರಬೇಕು ಎನ್ನುವ ಆಸೆ ಇರುವುದು ಸಾಮಾನ್ಯ. ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡಿಕೊಳ್ಳಿ ಪರ್ವಾಗಿಲ್ಲಾ, ಆದರೆ ಆದೇ ದೇಹ ದಂಡನೆ ದೇಹಕ್ಕೆ ಮಾರಕವಾದರೆ?. ಸಿಕ್ಸ್ 'ಪ್ಯಾಕ್ ಗೀಳು ಯುವಕನೊಬ್ಬನ ಪ್ರಾಣಕ್ಕೇ ಕುತ್ತಾಗಿದೆ.

ಬೆಂಗಳೂರಿನ ಕಬ್ಬನ್ ಪೇಟೆ ನಿವಾಸಿ ಕಿರಣ್ ಎಂಬಾತ ಬಾಡಿ ಬಿಲ್ಡ್ ಮಾಡಲು ಹೋಗಿ ಇದೀಗ ಜೀವವನ್ನೇ ಕಳೆದುಕೊಂಡಿದ್ದಾನೆ. ಸ್ಟಿರೈಡ್ ಇಂಜಕ್ಟ್ ಮಾಡಿಕೊಂಡು ಬಾಡಿ ಬಿಲ್ಡ್ ಮಾಡಿದ್ದರ ಪರಿಣಾಮ ರಿಯಾಕ್ಷನ್ ಆಗಿ ಮೆದುಳು ಕೆಲಸ ಮಾಡುತ್ತಿರಲಿಲ್ಲ. ಮಲ್ಲಿಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಕಿರಣ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಕುಮಾರಸ್ವಾಮಿ ಲೇಔಟ್ ನಲ್ಲಿರುವ ಫಿಟ್ನೆಸ್ ಜೀಮ್'ಗೆ ಕಳೆದ ಮೂರು ತಿಂಗಳಿಂದ ಹೋಗುತ್ತಿದ್ದ ಕಿರಣ್, ಜಿಮ್ ಟ್ರೈನರ್ ಮಾತು ಕೇಳಿ, ಬಾಡಿಗೆ ಸ್ಟಿರೈಡ್ ಇಂಜೆಕ್ಟ್ ಮಾಡಿಕೊಂಡಿದ್ದನಂತೆ. ಬಳಿಕ ಅನಾರೋಗ್ಯಕ್ಕೀಡಾದ ಈತ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ ಕೊನೆಯುಸಿರೆಳೆದಿದ್ದಾನೆ