ಸಾಮಾಜಿಕ ಜಾಲತಾಣ ಟ್ವಿಟರ್, ಪೇಮೆಂಟ್ ಮತ್ತು ವ್ಯಾಲೆಟ್ ಸೇರಿದಂತೆ ಆರ್ಥಿಕ ಉದ್ಯಮಗಳು ತಮ್ಮ ನೆಟ್‌ವರ್ಕ್‌ಗಳನ್ನು ಬಲಗೊಳಿಸುವಂತೆ ಸೂಚಿಸಲಾಗಿದ್ದು, ಅಹಿತಕರ ಘಟನೆ ಬಗ್ಗೆ ಸಚಿವಾಲಯಕ್ಕೆ ತಿಳಿಸುವಂತೆ ಸೂಚಿಸಲಾಗಿದೆ.
ನವದೆಹಲಿ(ಡಿ.14): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಉದ್ಯಮಿ ಮಲ್ಯ, ಪತ್ರಕರ್ತರಾದ ಬರ್ಖಾದತ್, ರವೀಶ್ ಕುಮಾರ್ ಅವರ ಟ್ವಿಟರ್ ಖಾತೆಗಳಿಗೆ ಲಿಜನ್ ಗ್ರೂಪ್ ಕನ್ನ ಹಾಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಾವತಿ ನಿಗಮ(ಎನ್ಪಿಸಿಐ) ಸಂಸ್ಥೆಯ ಜತೆ ಆರ್ಥಿಕ ವಲಯದ ಪರಿಶೀಲನೆ ಸೇರಿದಂತೆ ಇತರ ಕ್ರಮ ಕೈಗೊಳ್ಳುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಆದೇಶಿಸಿದೆ. ಅಲ್ಲದೆ, ಶಂಕಿತ ಚಟುವಟಿಕೆಗಳ ಪತ್ತೆಗಾಗಿ 16 ವರ್ಷಗಳ ಐಟಿ ಕಾಯ್ದೆ ಬದಲಾವಣೆಗೆ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್, ಪೇಮೆಂಟ್ ಮತ್ತು ವ್ಯಾಲೆಟ್ ಸೇರಿದಂತೆ ಆರ್ಥಿಕ ಉದ್ಯಮಗಳು ತಮ್ಮ ನೆಟ್ವರ್ಕ್ಗಳನ್ನು ಬಲಗೊಳಿಸುವಂತೆ ಸೂಚಿಸಲಾಗಿದ್ದು, ಅಹಿತಕರ ಘಟನೆ ಬಗ್ಗೆ ಸಚಿವಾಲಯಕ್ಕೆ ತಿಳಿಸುವಂತೆ ಸೂಚಿಸಲಾಗಿದೆ. ‘‘ಭಾರತದಲ್ಲಿರುವ ಮಾಹಿತಿ ತಂತ್ರಜ್ಞಾನದ ಇಡೀ ಮೂಲಭೂತ ಸೌಲಭ್ಯ ಭದ್ರತೆಯ ಗಟ್ಟಿತನದ ಬಗ್ಗೆ ಪರಿಶೀಲನೆಗೊಳಪಡಿಸಲು ಆದೇಶಿಸಲಾಗಿದೆ,’’ ಎಂದು ಸಚಿವ ಪ್ರಸಾದ್ ಹೇಳಿದ್ದಾರೆ.
ದೇಶದಲ್ಲಿ ನಗದು ರಹಿತ ವ್ಯವಹಾರಕ್ಕೆ ಸಂಬಂಸಿ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಡಿಜಿಟಲ್ ಪಾವತಿ ಬಗ್ಗೆ ಯಾವುದೇ ಭೀತಿ ಪಡಬೇಕಿಲ್ಲ ಎಂದಿದ್ದಾರೆ ರವಿಶಂಕರ್ ಪ್ರಸಾದ್. ಈ ಬಗ್ಗೆ ಐಡಿಎಸ್ಸಿ, ಐಸಿಐಸಿಐ, ಎಸ್ಬಿಐ , ಕೆನರಾ ಸೇರಿದಂತೆ ಇತರ 50 ಬ್ಯಾಂಕ್ ಭದ್ರತಾ ಮತ್ತು ತಾಂತ್ರಿಕ ಅಕಾರಿಗಳ ಜತೆ ಸಚಿವ ರವಿಶಂಕರ್ ಪ್ರಸಾದ್ ಅವರು ಸಮಾಲೋಚನೆ ನಡೆಸಿದ್ದಾರೆ.
