ನವದೆಹಲಿ[ಜು.14]: ವಿಭಿನ್ನ ದೃಷ್ಟಿಕೋನಕ್ಕೆ ಹೆಸರಾಗಿರುವ ಇಸ್ಫೋಸಿಸ್‌ ಫೌಂಡೇಷನ್‌ನ ಅಧ್ಯಕ್ಷ ಸುಧಾಮೂರ್ತಿ, ಇದೀಗ ತಮ್ಮ ಮನೆಯ ನಾಯಿಮರಿ ಗೋಪಿ ದೃಷ್ಟಿಕೋನದಲ್ಲಿ ಜಗತ್ತನ್ನು ನೋಡುವ ಕುರಿತು ಪುಸ್ತಕವೊಂದನ್ನು ಬರೆಯುತ್ತಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ.

ಗೋಪಿ ಡೈರಿಸ್‌’ ಹೆಸರಿನ ಸರಣಿಯ ಮೂರು ಪುಸ್ತಕಗಳಲ್ಲಿ, ಸುಧಾಮೂರ್ತಿ ತಮ್ಮ ಮನೆಯ ಸಾಕುನಾಯಿ ಗೋಪಿಯ ದೃಷ್ಟಿಕೋನದಲ್ಲಿ ಜಗತ್ತು ಹೇಗಿರುತ್ತದೆ ಎಂಬುದನ್ನು ಸಣ್ಣ ಸಣ್ಣ ಕಥೆಗಳ ರೂಪದಲ್ಲಿ ಹೇಳಿದ್ದಾರೆ. ಗೋಪಿ ಮನೆಗೆ ಬರುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಗೋಪಿ ಮನೆಯ ವಾತಾವರಣಕ್ಕೆ ಹೊಂದಿಕೊಂಡಿದ್ದು ಹೇಗೆ? ಕುಟುಂಬ ಸದಸ್ಯರ ಜೊತೆ ಪ್ರೀತಿ ಬೆಳೆಸಿಕೊಂಡಿದ್ದು, ಅದು ಜಗತ್ತನ್ನು ನೋಡುವ ರೀತಿ, ಜನರ ಬಗ್ಗೆ ಅದು ಯೋಚಿಸುವ ಬಗೆ ಹೀಗೆ ಗೋಪಿಯ ದೃಷ್ಟಿಕೋನದಲ್ಲಿ ಪ್ರಪಂಚವನ್ನು ನೋಡುವ ಬಗೆಯನ್ನು ಕತೆಯ ರೂಪದಲ್ಲಿ ನೀಡಲಾಗಿದೆ.

ಈ ಪುಸ್ತಕ ಮಕ್ಕಳಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಸುಧಾಮೂರ್ತಿ ಹೇಳಿದ್ದಾರೆ. ಈ ಪುಸ್ತಕಗಳನ್ನು ಹಾರ್ಪರ್‌ಕಾಲಿನ್ಸ್‌ ಇಂಡಿಯಾ ಪ್ರಕಾಶನ ಪ್ರಕಟಿಸಲಿದೆ.