Asianet Suvarna News Asianet Suvarna News

ಸಮಿತಿ ಹೆಸರಲ್ಲಿ ಕೋಟಿ ಕೋಟಿ ಹಣ ಶಾಸಕರ ಪಾಲು: ದೂರದ ಊರಿನ ಲೆಕ್ಕ ತೋರಿಸಿ ಹಣ ನುಂಗುತ್ತಿದ್ದಾರೆ ಜನನಾಯಕರು

ಸಮಾಜ ಸೇವೆ ಎಂಬ ಹೆಸರಲ್ಲಿ ನಮ್ಮ ಶಾಸಕರು ಆಯ್ಕೆ ಆಗಿ ಹೋಗಿರುತ್ತಾರೆ ಆದರೆ ಅವರಿಗೆ ಸಿಗುವ ಸೌಲಭ್ಯಗಳಿಗೆ ಯಾವತ್ತಿಗೂ ಕೊರತೆಯೇ ಇರುವುದಿಲ್ಲ. ಎಷ್ಟು ಸಿಗುತ್ತದೋ ಅಷ್ಟು ಸಿಗಲಿ ಎಂದು ಹಾತೊರೆಯುತ್ತಿರುತ್ತಾರೆ. ನಮ್ಮ ರಾಜ್ಯದ ಶಾಸಕರ ಅದೃಷ್ಟವಂತರು ಹೀಗಾಗಿ ರಾಜ್ಯದಲ್ಲಿ ಬರಗಾಲ ಇರಲಿ, ಪ್ರವಾಹ ಬರಲಿ ಅವರು ಪಡೆದುಕೊಳ್ಳುವ ಸೌಲಭ್ಯಗಳಿಗೆ, ಭತ್ಯೆಗಳಿಗೆ  ಮಾತ್ರ ಕೊರತೆ ಇರುವುದಿಲ್ಲ. ಅಧಿವೇಶನ ಇರಲಿ, ಬಿಡಲಿ ಆದರೆ ವಿಧಾನಸಭೆ, ವಿಧಾನಪರಿಷತ್​ ಸಚಿವಾಲಯದ ಬೊಕ್ಕಸದಿಂದ ಭತ್ಯೆಗಳ ಹೆಸರಿನಲ್ಲೇ ಲಕ್ಷಾಂತರ ರೂಪಾಯಿ ಖಾಲಿ ಆಗುತ್ತೆ.

The Facilities And Fund Given To A MLA Will Put You In Shock
  • Facebook
  • Twitter
  • Whatsapp

ಬೆಂಗಳೂರು(ಎ.05): ಸಮಾಜ ಸೇವೆ ಎಂಬ ಹೆಸರಲ್ಲಿ ನಮ್ಮ ಶಾಸಕರು ಆಯ್ಕೆ ಆಗಿ ಹೋಗಿರುತ್ತಾರೆ ಆದರೆ ಅವರಿಗೆ ಸಿಗುವ ಸೌಲಭ್ಯಗಳಿಗೆ ಯಾವತ್ತಿಗೂ ಕೊರತೆಯೇ ಇರುವುದಿಲ್ಲ. ಎಷ್ಟು ಸಿಗುತ್ತದೋ ಅಷ್ಟು ಸಿಗಲಿ ಎಂದು ಹಾತೊರೆಯುತ್ತಿರುತ್ತಾರೆ. ನಮ್ಮ ರಾಜ್ಯದ ಶಾಸಕರ ಅದೃಷ್ಟವಂತರು ಹೀಗಾಗಿ ರಾಜ್ಯದಲ್ಲಿ ಬರಗಾಲ ಇರಲಿ, ಪ್ರವಾಹ ಬರಲಿ ಅವರು ಪಡೆದುಕೊಳ್ಳುವ ಸೌಲಭ್ಯಗಳಿಗೆ, ಭತ್ಯೆಗಳಿಗೆ  ಮಾತ್ರ ಕೊರತೆ ಇರುವುದಿಲ್ಲ. ಅಧಿವೇಶನ ಇರಲಿ, ಬಿಡಲಿ ಆದರೆ ವಿಧಾನಸಭೆ, ವಿಧಾನಪರಿಷತ್​ ಸಚಿವಾಲಯದ ಬೊಕ್ಕಸದಿಂದ ಭತ್ಯೆಗಳ ಹೆಸರಿನಲ್ಲೇ ಲಕ್ಷಾಂತರ ರೂಪಾಯಿ ಖಾಲಿ ಆಗುತ್ತೆ.

ಭತ್ಯೆ ಹೆಸರಲ್ಲಿ ಶಾಸಕರ ಜೇಬಿಗೆ ಹಣ: 3 ವರ್ಷದಲ್ಲಿ ಖರ್ಚಾಗಿದ್ದು 60 ಕೋಟಿ ರೂಪಾಯಿ!

ಶಾಸಕರಾಗೋದೆ ತಡ, ಅವರಿಗೆ ಆ ಕ್ಷಣದಿಂದಲೇ ಹಲವು ಭತ್ಯೆಗಳು ಬರಲು ಆರಂಭವಾಗುತ್ತದೆ. ಅದರಲ್ಲೂ ವಿವಿಧ ಸಮಿತಿಗಳಿಗೆ ಸದಸ್ಯರಾಗಿರುವ ಶಾಸಕರುಗಳು, ಪ್ರತ್ಯೇಕವಾಗಿ ಪ್ರಯಾಣ ಭತ್ಯೆ, ದಿನ ಭತ್ಯೆ ರೂಪದಲ್ಲಿ ಸಾವಿರಾರು ರೂಪಾಯಿ ಪಡ್ಕೊಳ್ತಿದಾರೆ. ಇದಕ್ಕೆ ಕಳೆದ 3 ವರ್ಷಗಳಲ್ಲಿ ಸಮಿತಿಗಳಿಗೆ ಸದಸ್ಯರಾಗಿರುವ ಶಾಸಕರುಗಳಿಗೆ ಪಾವತಿ ಆಗಿರೋದು ಬರೋಬ್ಬರಿ 60 ಕೋಟಿ ರೂಪಾಯಿ.

ಒಂದು ಸಭೆಗೆ 5 ಲಕ್ಷ ರೂಪಾಯಿ ಖರ್ಚು!

ವಿಧಾನಸಭೆ ಸಚಿವಾಲಯದಲ್ಲಿ ಇರುವ ಒಟ್ಟು ಸಮಿತಿಗಳ ಸಂಖ್ಯೆ  18. ಒಂದೊಂದು​ ಸಮಿತಿಯಲ್ಲಿ 12 ಮಂದಿ ಶಾಸಕರು ಇರುತ್ತಾರೆ. ವಾರದಲ್ಲಿ ಒಂದು​ ದಿನ ಈ ಸಮಿತಿ ಸಭೆ ಸೇರುತ್ತದೆ. ಸಭೆ ನಡೆಯುವುದು ಕೆಲವೇ ಕೆಲವು ಗಂಟೆಗಳ ಕಾಲ ಮಾತ್ರ. ಬೆಂಗಳೂರು ನಗರದ ಶಾಸಕರನ್ನು ಹೊರತುಪಡಿಸಿ ಒಬ್ಬೊಬ್ಬ ಶಾಸಕರಿಗೆ ಒಟ್ಟು 5 ದಿನದ ಪ್ರಯಾಣ ಭತ್ಯೆ, ದಿನ ಭತ್ಯೆ ಸೇರಿ ಗರಿಷ್ಠ ಎಂದರೆ 44 ಸಾವಿರ ರೂಪಾಯಿವರೆಗೆ ಸಿಗುತ್ತದೆ. ಸಮಿತಿ ಸದಸ್ಯರಿಗೆ ಒಂದು ದಿನದಲ್ಲಿ ನಡೆಯುವ ಸಭೆಗೆ ಕೊಡುತ್ತಿರುವ ಪ್ರಯಾಣ, ದಿನ ಭತ್ಯೆ ಮೊತ್ತ  5 ಲಕ್ಷ ದಾಟುತ್ತದೆ.

ಬಹುತೇಕ ಶಾಸಕರು ಬೆಂಗಳೂರಿನಲ್ಲೇ ವಾಸ ಇದ್ದರೂ ಸಮಿತಿ ಸಭೆಗೆ ಮಾತ್ರ ಕ್ಷೇತ್ರದಿಂದಲೇ ಬೆಂಗಳೂರಿಗೆ ಬರ್ತಿರೋದು ಅಂತ್ಹೇಳಿ ಪ್ರಯಾಣ ಮತ್ತು ದಿನ ಭತ್ಯೆ ಪಡೀತಾ ಇದ್ದಾರೆ. ಇನ್ನು, ಬೆಂಗಳೂರಿ​ನಲ್ಲೇ ವಾಸ ಇರೋ ಶಾಸಕರಿಗೂ 5 ದಿನಕ್ಕೆ ಲೆಕ್ಕ ಹಾಕಿ ಪ್ರಯಾಣ, ದಿನ ಭತ್ಯೆ ಕೊಡ್ತಿರೋದು ಎಷ್ಟರಮಟ್ಟಿಗೆ ಸರಿ ಅನ್ನೋ ಆಕ್ಷೇಪ ಕೂಡ  ಕೇಳಿಬಂದಿದೆ.

ಒಟ್ಟಿನಲ್ಲಿ, ಕಾಟಾಚಾರಕ್ಕಷ್ಟೇ ನಡೆಯುವ ಸಮಿತಿ ಸಭೆಗೆ ಇಷ್ಟೆಲ್ಲಾ ಖರ್ಚು ಬೇಕಾ ಎನ್ನುವ ಪ್ರಶ್ನೆಗೆ ಶಾಸಕರುಗಳೇ ಉತ್ತರಿಸ್ಬೇಕು.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​

Follow Us:
Download App:
  • android
  • ios