ನಾಳೆಯಿಂದ ದೇಶಾದ್ಯಂತ ಹೊಸ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಗೆ ಬರಲಿದೆ. ತೆರಿಗೆ ಪದ್ಧತಿ, ತೆರಿಗೆ ದರಗಳ ಕುರಿತು ವರ್ಷದಿಂದ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿದ್ದರೂ, ಇಂದಿಗೂ ಬಹುತೇಕ ಮಂದಿಗೆ ಈ ತೆರಿಗೆ ಏನು? ಹೇಗೆ ಜಾರಿಗೆ ಬರಲಿದೆ? ಯಾವ ಬಗೆಯಲ್ಲಿ ತೆರಿಗೆ ಹಾಕಲಾಗುತ್ತದೆ ಎಂಬ ಮಾಹಿತಿಯ ಕೊರತೆ ಇದೆ. ಜನಸಾಮಾನ್ಯರಿರಲಿ, ಕೆಲವು ವಹಿವಾಟುದಾರರು, ಉದ್ಯಮಿಗಳು, ವ್ಯಾಪಾರಿಗಳಿಗೂ ಗೊಂದಲಗಳಿವೆ. ಆ ಹಿನ್ನೆಲೆಯಲ್ಲಿ ಜಿಎಸ್‌ಟಿಯನ್ನು ಸರಳ ರೀತಿಯಲ್ಲಿ ವಿವರಿಸುವ ಪ್ರಯತ್ನ ಇದು.
ನಾಳೆಯಿಂದದೇಶಾದ್ಯಂತಹೊಸತೆರಿಗೆವ್ಯವಸ್ಥೆಜಿಎಸ್ಟಿಜಾರಿಗೆಬರಲಿದೆ. ತೆರಿಗೆಪದ್ಧತಿ, ತೆರಿಗೆದರಗಳಕುರಿತುವರ್ಷದಿಂದದೇಶಾದ್ಯಂತವ್ಯಾಪಕಚರ್ಚೆನಡೆದಿದ್ದರೂ, ಇಂದಿಗೂಬಹುತೇಕಮಂದಿಗೆಈತೆರಿಗೆಏನು? ಹೇಗೆಜಾರಿಗೆಬರಲಿದೆ? ಯಾವಬಗೆಯಲ್ಲಿತೆರಿಗೆಹಾಕಲಾಗುತ್ತದೆಎಂಬಮಾಹಿತಿಯಕೊರತೆಇದೆ. ಜನಸಾಮಾನ್ಯರಿರಲಿ, ಕೆಲವುವಹಿವಾಟುದಾರರು, ಉದ್ಯಮಿಗಳು, ವ್ಯಾಪಾರಿಗಳಿಗೂಗೊಂದಲಗಳಿವೆ. ಆಹಿನ್ನೆಲೆಯಲ್ಲಿಜಿಎಸ್ಟಿಯನ್ನುಸರಳರೀತಿಯಲ್ಲಿವಿವರಿಸುವಪ್ರಯತ್ನಇದು.
ಜಿಎಸ್ಟಿ ಕಾರ್ಯವಿಧಾನ
‘ವಸ್ತುವಿನ ಒಟ್ಟಾರೆ ಮೌಲ್ಯ' ವೃದ್ಧಿಯಲ್ಲಿ ವ್ಯಾಪಾರಿಯ ಅಥವಾ ವಹಿವಾಟು ದಾರನ ಕೊಡುಗೆ ಏನು ಎಂಬುದನ್ನು ನಿರ್ಧರಿಸಿ ಅದರ ಮೇಲೆ ಮಾತ್ರ ತೆರಿಗೆ ಹಾಕುವ ಸಿದ್ಧಾಂತದ ಮೇಲೆ ಜಿಎಸ್ಟಿ ರೂಪಿಸಲಾಗಿದೆ. ಅಲ್ಲದೆ, ಪಾವತಿಸಲಾದ ತೆರಿಗೆಯ ಪ್ರಮಾಣವನ್ನು ಕೊಳ್ಳುವವರ ಮತ್ತು ಮಾರುವವರ ಸರಪಳಿಯಲ್ಲಿ ಆ ವಸ್ತುವನ್ನು ಖರೀದಿಮಾಡುವ ಮುಂದಿನ ಗ್ರಾಹಕನಿಗೆ ಹಾಕುವ ದರದಲ್ಲಿ ಸೇರಿಸುವಂತಿಲ್ಲ. ಹಾಗಾಗಿ ವಸ್ತುವಿನ ಚಲನೆಯುದ್ದಕ್ಕೂ ಆ ವಸ್ತುವಿನ ಮೌಲ್ಯವೃದ್ಧಿಗೆ ನೀಡುವ ಕೊಡುಗೆಯ ಆಧಾರದ ಮೇಲೆ ಎಲ್ಲಾ ವಹಿವಾಟುದಾರರಿಗೂ ನಿರ್ದಿಷ್ಟತೆರಿಗೆ ಹೊರೆ ಬೀಳುತ್ತದೆ. ಹಾಗಾಗಿ ಯಾವುದೇ ಒಬ್ಬ ವಹಿವಾಟುದಾರ ತೆರಿಗೆ ಭಾರ ಹೊರುವ ಪ್ರಮೇಯ ಉದ್ಭವಿಸದು. ಅಲ್ಲದೆ, ಒಂದು ವಸ್ತುವಿನ ಮೇಲಿನ ತೆರಿಗೆ ದರ ದೇಶಾದ್ಯಂತ ಏಕರೀತಿ ಇರುವುದರಿಂದ ಸರಕುಗಳನ್ನು ಕಡಿಮೆ ದರಕ್ಕೆ ಕೊಂಡು ಮತ್ತೊಂದೆಡೆ ಅಧಿಕ ದರಕ್ಕೆ ಮಾರಾಟ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ.

