ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕೋಟ್ಯಾಂತರ ಹಣ ಪತ್ತೆಯಾಗಿದೆ ಎಂದು ಬಿಂಬಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕೋಟ್ಯಾಂತರ ಹಣ ಪತ್ತೆಯಾಗಿದೆ ಎಂದು ಬಿಂಬಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಕಾಂಗ್ರೆಸ್ ನಾಯಕ ಶಿವಕುಮಾರ್ ಮನೆಯ ಲಾಕರ್ ‘ನಲ್ಲಿ ಪತ್ತೆಯಾದ ಹಣವೆಂದು ಆ ವಿಡಿಯೋಗಳಿಗೆ ಷರಾ ಬರೆಯಲಾಗಿತ್ತು. ಅದರ ಜೊತೆಗೆ ಇನ್ನೂ ರೆಕ್ಕೆ ಪುಕ್ಕಗಳನ್ನು ಕಟ್ಟಿಕೊಂಡು ಆ ವಿಡಿಯೋ ಫೇಸ್ಬುಕ್, ಟ್ವಿಟರ್, ಹಾಗೂ ವಾಟ್ಸಪ್’ಗಳಂತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ಆ ವಿಡಿಯೋನ ವಾಸ್ತವಿಕತೆ ಬೇರೇನೆ ಇದೆ. ರೋಹಿತ್ ಟಂಡನ್ ಎಂಬವರ ಟಿ & ಟಿ ಎಂಬ ಲಾ ಕಂಪನಿಯ ಮೇಲೆ ಐಟಿ ದಾಳಿ ನಡೆದಾಗ ಚಿತ್ರೀಕರಿಸಲಾದ ವಿಡಿಯೋ ಅದಾಗಿದೆ. 2016 ಡಿಸೆಂಬರ್’ನಲ್ಲಿ ನಡೆದ ಐಟಿ ದಾಳಿಯಲ್ಲಿ ಟಂಡನ್ ಕಚೇರಿ ಹಾಗೂ ಮನೆಯಿಂದ ಸುಮಾರು 13 ಕೋಟಿ ನಗದು ಹಣ ಪತ್ತೆಯಾಗಿತ್ತು. ಆ ವಿಡಿಯೋವನ್ನು ಶಿವ ಸನ್ನಿ ಎಂಬ ಪತ್ರಕರ್ತ ಪೋಸ್ಟ್ ಮಾಡಿದ್ದರು.

Scroll to load tweet…