ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಭೂತಪೂರ್ವ ಗೆಲುವು ಸಾಧಿಸಿ ಸಂಸತ್ತಿಗೆ ಕಾಲಿಟ್ಟಿದ್ದಾರೆ. ಮಂಡ್ಯ ಚುನಾವಣಾ ಅಖಾಡ ರಾಜ್ಯದ ಎಲ್ಲಾ ಕ್ಷೇತ್ರಕ್ಕಿಂತ ಹೆಚ್ಚು ಗಮನ ಸೆಳೆದಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಭರ್ಜರಿ ಪ್ರಚಾರ, ಆರೋಪ-ಪ್ರತ್ಯಾರೋಪದ ನಂತರ ಕೊನೆಗೂ ಸುಮಲತಾ ಗೆದ್ದಿದ್ದಾರೆ. 

ಮಂಡ್ಯ ಜನರಿಗೆ ಕೃತಜ್ಞತೆ ಹೇಳಲು ಸುಮಲತಾ ಅಂಬರೀಶ್ ಮೇ 29 ರಂದು ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಅಂಬಿ ಜಯಂತೋತ್ಸವ ಆಯೋಜಿಸಿದ್ದಾರೆ.

 

ಅಧಿಕಾರ ಹಣ ಪಕ್ಷ ಯಾವುದೂ ಇಲ್ಲದ ಮಂಡ್ಯ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಹೆಜ್ಜೆ ಹಾಕಿದೆ. ,ಮಂಡ್ಯದ ಜನತೆ ಪಕ್ಷ ಎಲ್ಲವನ್ನೂ ಬದಿಗಿಟ್ಟು ನನ್ನೊಂದಿಗೆ ಹೆಜ್ಜೆ ಹಾಕಿ ನನಗೆ ಅಭೂತಪೂರ್ವ ಜಯ ದೊರಕಿಸಿಕೊಟ್ಟಿದ್ದಾರೆ.  ಅವರಿಗೆ ಕೃತಜ್ಞತೆ ಹೇಳುವ ದಿನ ಎಂದು ಟ್ವೀಟ್ ಮಾಡಿದ್ದಾರೆ. 

ಮೇ 29 ರಂದು ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಮದ್ಯಾಹ್ನ 2 ಗಂಟೆಗೆ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.