ವೇಶ್ಯಾವಾಟಿಕೆ: ಕರ್ನಾಟಕದ ಮಾಡೆಲ್‌ ಬಂಧನ

Thane: Prostitution Racket Busted, 2 Out Of 3 Arrested
Highlights

ಮುಂಬೈಯ ಭಾಯಂದರ್‌ ಟೌನ್‌ಶಿಪ್‌ನಲ್ಲಿ ಕರ್ನಾಟಕದ ಓರ್ವ ಮಾಡೆಲ್‌ ಸೇರಿ, ಇಬ್ಬರು ಮಾಡೆಲ್‌ಗಳು ಹಾಗೂ ಇತರ ಕೆಲವರನ್ನು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. 
 

ಠಾಣೆ: ಮುಂಬೈಯ ಭಾಯಂದರ್‌ ಟೌನ್‌ಶಿಪ್‌ನಲ್ಲಿ ಕರ್ನಾಟಕದ ಓರ್ವ ಮಾಡೆಲ್‌ ಸೇರಿ, ಇಬ್ಬರು ಮಾಡೆಲ್‌ಗಳು ಹಾಗೂ ಇತರ ಕೆಲವರನ್ನು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. 

ಮೀರಾ ರೋಡ್‌ನಲ್ಲಿ ಮುಚ್ಚಲ್ಪಟ್ಟಿದ್ದ ಸೆಲೂನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಬ್ಬರು ಪುರುಷರನ್ನೂ ಬಂಧಿಸಲಾಗಿದೆ. 

ಇನ್ನೋರ್ವ ಬಂಧಿತ ಮಾಡೆಲ್‌ ಬಿಹಾರ ಮೂಲದವಳು. ಇಬ್ಬರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಗ್ರಾಹಕರನ್ನು ಸೆಳೆಯಲು ಮಾಡೆಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಯಕ್ರಮಗಳಲ್ಲಿ ಸಂಪರ್ಕವಾಗುವ ಮಹಿಳೆಯರನ್ನು ಅವರು ಈ ಕೃತ್ಯಕ್ಕೆ ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

loader