ಮಕ್ಕಳ ರಕ್ಷಣೆಗೆ ಮೈ ಜುಂ ಎನ್ನಿಸುವ ಅಪಾಯಕಾರಿ ಸಾಹಸ

Thai cave rescue: Four more boys pulled from flooded cave
Highlights

ಥಾಯ್ಲೆಂಡ್‌ ಗುಹೆಯೊಂದರಲ್ಲಿ ಕಳೆದ ಎರಡು ವಾರಗಳಿಂದ ಸಿಲುಕಿರುವ ಮಕ್ಕಳ ರಕ್ಷಣೆ ಕಾರ್ಯ ಸಾಗುತ್ತಲೇ ಇದೆ. ರಕ್ಷಣಾ ಪಡೆಯವರು ಸಹ ತಮ್ಮ ಜೀವ ಪಣಕ್ಕಿಟ್ಟು ಸಾಹಸ ಮೆರೆಯುತ್ತಿದ್ದಾರೆ. ಇಂದು ಏನೇನಾಯಿತು..?

ಬ್ಯಾಂಕಾಕ್‌[ಜು.9]  ಥಾಯ್ಲಂಡ್‌ ಗುಹೆಯೊಳಗೆ ಬಂಧಿಯಾಗಿರುವ 12 ಮಂದಿ ಬಾಲಕರು ಮತ್ತು ಅವರ ಕೋಚ್‌ ಪೈಕಿ ಇಂದು ನಾಲ್ವರು ಬಾಲಕರನ್ನು ರಕ್ಷಿಸಲಾಗಿದೆ. ಇದರೊಂದಿಗೆ‌ ಈ ವರೆಗೆ ಗುಹೆಯಿಂದ ಎಂಟು ಬಾಲಕರನ್ನು ಹೊರಗೆ ತಂದಂತಾಗಿದೆ. 

ಭಾನುವಾರ ನಾಲ್ಕು ಬಾಲಕರನ್ನು ರಕ್ಷಣಾ ತಂಡ ಹರಸಾಹಸ ಪಟ್ಟು ರಕ್ಷಿಸಿತ್ತು.  ರಕ್ಷಣೆಯಾದ ಬಾಲಕರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿತ್ತು. ನಿಜಕ್ಕೂ ರಕ್ಷಣಾ ಕಾರ್ಯ ನಡೆಯುವ ರೀತಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಬಾಲಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಹದಿಮೂರು ವಿದೇಶಿ ಡೈವರ್‌ಗಳು, ಐವರು ಥಾಯ್ಲಂಡ್‌ನ‌ ಉನ್ನತ ನೇವಿ ಸೀಲ್‌ ತಂಡದವರು ಇದ್ದಾರೆ.

ಗುಹೆಯೊಳಗೆ ಸಿಲುಕಿ ಸಂಕಷ್ಟದಲ್ಲಿರುವ ಬಾಲಕರ ರಕ್ಷಣೆಗೆ 'ಮಕ್ಕಳ ಗಾತ್ರದ ಸಬ್‌ಮೆರಿನ್‌'ಗಳನ್ನು ಅಮೆರಿಕ ರವಾನಿಸಲಿದೆ. ಲಾಸ್ ಏಂಜಲಿಸ್‌ನಲ್ಲಿರುವ ಸ್ಪೇಸ್ ಎಕ್ಸ್ ಮತ್ತು ಟೆಲ್ಸಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ತಮ್ಮ ಬಳಿ ಇರುವ ಮಕ್ಕಳ ಗಾತ್ರದ ಸಬ್‌ಮೆರಿನ್‌ಗಳನ್ನು ಥಾಯ್ಲೆಂಡ್‌ಗೆ ರವಾನಿಸುವುದಾಗಿ ಹೇಳಿದ್ದು ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ತರುತ್ತೇವೆ ಎಂದು ರಕ್ಷಣಾ ಪಡೆಯ ಯೋಧರು ಹೇಳಿದ್ದಾರೆ.

 

loader