ಸಿಲುಕಿರುವ ಗುಹೆಯಿಂದಲೇ ಪೋಷಕರಿಗೆ 12 ಮಕ್ಕಳ ಪತ್ರ

Thai boys trapped in cave write letters to their parents
Highlights

ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಕಳೆದ ಎರಡು ವಾರಗಳಿಂದ ಸಿಲುಕಿರುವ 12 ಮಕ್ಕಳು ತಮ್ಮ ಪೋಷಕರಿಗೆ ಗುಹೆಯಿಂದಲೇ ಭಾವನಾತ್ಮಕ ಪತ್ರಗಳನ್ನು ರವಾನಿಸಿದ್ದಾರೆ.

ಬ್ಯಾಂಕಾಕ್‌: ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಕಳೆದ ಎರಡು ವಾರಗಳಿಂದ ಸಿಲುಕಿರುವ 12 ಮಕ್ಕಳು ತಮ್ಮ ಪೋಷಕರಿಗೆ ಗುಹೆಯಿಂದಲೇ ಭಾವನಾತ್ಮಕ ಪತ್ರಗಳನ್ನು ರವಾನಿಸಿದ್ದಾರೆ. ‘ಹೆದರಬೇಡಿ, ನಾವಿಲ್ಲಿ ಸುರಕ್ಷಿತವಾಗಿದ್ದೇವೆ. ಆದರೆ ಕುಟುಂಬದಿಂದ ದೂರವಿರುವ ಭಾವ ಕಾಡುತ್ತಿದೆ’ ಎಂದು ಶೋಕಸಾಗರದಲ್ಲಿ ಮುಳುಗಿರುವ ತಮ್ಮ ಪೋಷಕರಿಗೆ ಪತ್ರಗಳನ್ನು ಬರೆದಿದ್ದಾರೆ.

ಒಂದೇ ನೋಟ್‌ಪುಸ್ತಕದ ವಿವಿಧ ಪುಟಗಳಲ್ಲಿ ಈ ಮಕ್ಕಳು ಬರೆದಿರುವ ಪತ್ರಗಳನ್ನು ನುರಿತ ಈಜುಗಾರರು ಗುಹೆಯಿಂದ ಹೊರಗೆ ತಂದಿದ್ದಾರೆ. ಆ ಪತ್ರಗಳನ್ನು ಮಕ್ಕಳ ಪೋಷಕರಿಗೆ ರವಾನಿಸಲಾಗಿದೆ. ಇದೇ ವೇಳೆ ಮಕ್ಕಳ ಜತೆಗೆ ಸಿಲುಕಿಕೊಂಡಿರುವ ಹಾಗೂ ಮಕ್ಕಳಿಗೆ ಧೈರ್ಯ ತುಂಬುತ್ತಿರುವ ಕೋಚ್‌ ಕೂಡ ಪತ್ರ ಬರೆದಿದ್ದು, ಬಾಲಕರ ಪೋಷಕರ ಕ್ಷಮೆ ಯಾಚಿಸಿದ್ದಾರೆ.

‘ನಾನು ಚೆನ್ನಾಗಿದ್ದೇನೆ. ಆದರೆ ಇಲ್ಲಿ ಚಳಿ ಇದೆ. ಆದರೂ ಚಿಂತೆ ಪಡಬೇಡಿ. ನಾನು ಹೊರಗೆ ಬಂದ ಬಳಿಕ ನನ್ನ ಹುಟ್ಟುಹಬ್ಬದ ಪಾರ್ಟಿ ಮಾಡುವುದನ್ನು ಮರೆಯಬೇಡಿ’ ಎಂದು ಬಾಲಕನೊಬ್ಬ ಪತ್ರದಲ್ಲಿ ಬರೆದಿದ್ದಾನೆ. ಟುನ್‌ ಎಂಬ ಮತ್ತೊಬ್ಬ ಬಾಲಕ ‘ಅಪ್ಪ, ಅಮ್ಮಾ... ದಯಮಾಡಿ ಚಿಂತೆಪಡಬೇಡಿ. ಇಲ್ಲಿ ಚೆನ್ನಾಗಿದ್ದೇನೆ. ಫ್ರೈಡ್‌ ಚಿಕನ್‌ ತಿನ್ನಲು ಹೊರಗೆ ಹೋಗೋಣ ಎಂದು ಗೆಳೆಯನಿಗೆ ಈಗಾಗಲೇ ಹೇಳಿದ್ದೇನೆ’ ಎಂದು ಬರೆದುಕೊಂಡಿದ್ದಾನೆ.

11ರಿಂದ 16ರ ವರ್ಷದ 12 ಬಾಲಕರು ಜೂ.23ರಂದು ಫುಟ್‌ಬಾಲ್‌ ಅಭ್ಯಾಸ ಮುಗಿಸಿ, ಗುಹೆಯೊಂದನ್ನು ನೋಡಲು ಹೋಗಿದ್ದರು. ವಾಪಸ್‌ ಬರುವಾಗ ಗುಹೆಗೆ ಪ್ರವಾಹದ ನೀರು ನುಗ್ಗಿತ್ತು. ಅವರು ಮರಳಬೇಕಾದ ಮಾರ್ಗ ಬಂದ್‌ ಆಗಿತ್ತು. ದುರ್ಗಮ ಗುಹೆ ಇದಾಗಿರುವುದರಿಂದ ಕಳೆದ 10 ದಿನಗಳಿಂದ ರಕ್ಷಣಾ ತಂಡಗಳು ಏನೆಲ್ಲಾ ಕಸರತ್ತು ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

loader