2008 ರಲ್ಲಿ ಗುಜರಾತಿನಲ್ಲಿ ಸರಣಿ ಬಾಂಬ್ ಸ್ಪೋಟವೊಂದು ನಡೆದಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಉಗ್ರಗಾಮಿಗಳನ್ನ ನಿನ್ನೆ ಬಳ್ಳಾರಿ ಕೋರ್ಟ್ ಗೆ ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ಗುಜರಾತಿಗೂ ಬಳ್ಳಾರಿಗೂ ಏನ್ ಲಿಂಕ್ ಅಂತೀರಾ..? ಇದೆ ಅಲ್ಲಿನ ಘಟನೆಗೆ ಲಿಂಕ್ ಕೊಟ್ಟಿದ್ದು ಬ್ಲಾಸ್ಟ್ ಗೆ ಬಳಸಿದ್ದ ವಾಹನಗಳು. ಹೌದು ಉಗ್ರಗಾಮಿಗಳು ಬಳಸಿದ್ದ ವಾಹನಗಳು ಕರ್ನಾಟಕದಿಂದಲೇ ಕಳ್ಳತನವಾಗಿತ್ತು. ಆದ್ದರಿಂದ ಭಯೋತ್ಪಾದಕರನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾತ್ತು.

ಬಳ್ಳಾರಿ(ಆ.01): 2008 ರಲ್ಲಿ ಗುಜರಾತಿನಲ್ಲಿ ಸರಣಿ ಬಾಂಬ್ ಸ್ಪೋಟವೊಂದು ನಡೆದಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಉಗ್ರಗಾಮಿಗಳನ್ನ ನಿನ್ನೆ ಬಳ್ಳಾರಿ ಕೋರ್ಟ್ ಗೆ ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ಗುಜರಾತಿಗೂ ಬಳ್ಳಾರಿಗೂ ಏನ್ ಲಿಂಕ್ ಅಂತೀರಾ..? ಇದೆ ಅಲ್ಲಿನ ಘಟನೆಗೆ ಲಿಂಕ್ ಕೊಟ್ಟಿದ್ದು ಬ್ಲಾಸ್ಟ್ ಗೆ ಬಳಸಿದ್ದ ವಾಹನಗಳು. ಹೌದು ಉಗ್ರಗಾಮಿಗಳು ಬಳಸಿದ್ದ ವಾಹನಗಳು ಕರ್ನಾಟಕದಿಂದಲೇ ಕಳ್ಳತನವಾಗಿತ್ತು. ಆದ್ದರಿಂದ ಭಯೋತ್ಪಾದಕರನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಲಾಸ್ಟ್ ಗೆ ಬಳಸಿದ ಕಾರು, ಬೈಕ್ ಗಳನ್ನ ಕೊಪ್ಪಳ ಮತ್ತು ಹೊಸಪೇಟೆಯಲ್ಲಿ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ .ಈ ಕುರಿತು ಕೊಪ್ಪಳ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ಕೂಡಾ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾದುಲ್ಲಾ , ರಾಜುದ್ದೀನ್ ಸಾಸೀರ್, ಮತ್ತು ಶೇಖ್ ಆಹ್ಮದ್ ರನ್ನು ಬಳ್ಳಾರಿಯ ಸಿಜೆಎಂ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯದೀಶರು ಅಗಸ್ಟ್ 7,8,9 ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ಇನ್ನು, ಈ ಮೂವರು ಆರೋಪಿಗಳು ಉಗ್ರಗಾಮಿ ಯಾಸಿನ್ ಭಟ್ಕಳ್ ಸಹಚರರು ಎನ್ನಲಾಗುತ್ತಿದೆ.