Asianet Suvarna News Asianet Suvarna News

ಹಸುಳೆ ಮೈಯಲ್ಲಿ ಬಾಂಬ್ ಸಾಗಣೆ..!

ಮಕ್ಕಳನ್ನು ಬಳಸಿಕೊಂಡು ಆತ್ಮಾಹುತಿ ದಾಳಿ ನಡೆಸುವಂಥ ನೀಚ ಕೃತ್ಯಕ್ಕೆ ಉಗ್ರರು ಇಳಿಯುವ ಹಲವು ಪ್ರಕರಣಗಳು ಈ ಹಿಂದೆ ವರದಿಯಾಗಿದೆ. ಆದರೆ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು, ಕುಂದುಜ್ ನಗರದ ಮೇಲೆ ಸ್ಫೋಟ ನಡೆಸಲು ಬೇಕಾದ ಸ್ಫೋಟಕ ಪದಾರ್ಥಗಳನ್ನು ಸಾಗಿಸಲು 4 ತಿಂಗಳ ಹಸುಗೂಸನ್ನು ಬಳಸಿಕೊಂಡ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 

Terrorists Hide Bomb Inside Baby

ಕಾಬೂಲ್: ಮಕ್ಕಳನ್ನು ಬಳಸಿಕೊಂಡು ಆತ್ಮಾಹುತಿ ದಾಳಿ ನಡೆಸುವಂಥ ನೀಚ ಕೃತ್ಯಕ್ಕೆ ಉಗ್ರರು ಇಳಿಯುವ ಹಲವು ಪ್ರಕರಣಗಳು ಈ ಹಿಂದೆ ವರದಿಯಾಗಿದೆ. ಆದರೆ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು, ಕುಂದುಜ್ ನಗರದ ಮೇಲೆ ಸ್ಫೋಟ ನಡೆಸಲು ಬೇಕಾದ ಸ್ಫೋಟಕ ಪದಾರ್ಥಗಳನ್ನು ಸಾಗಿಸಲು 4 ತಿಂಗಳ ಹಸುಗೂಸನ್ನು ಬಳಸಿಕೊಂಡ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 

ಕೇವಲ ಸ್ಫೋಟಕ ಸಾಗಿಸಲು ಮಾತ್ರವೇ ಮಗುವನ್ನು ಬಳಸಿಕೊಳ್ಳಲಾಗಿತ್ತೇ ಅಥವಾ ಮಗುವನ್ನೇ ಆತ್ಮಾಹುತಿ ಬಾಂಬರ್ ಆಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿತ್ತೇ ಎಂಬ ವಿಷಯ ಇನ್ನೂ ಖಚಿತಪಟ್ಟಿಲ್ಲ. ಪ್ರಕರಣ ಸಂಬಂಧ ಭದ್ರತಾ ಸಂಸ್ಥೆಗಳು ಓರ್ವ ಮಹಿಳೆ ಸೇರಿದಂತೆ 5 ಜನರನ್ನು ಬಂಧಿಸಿದ್ದು ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿವೆ ಎಂದು ಕಾಬೂಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮಗು ಬಾಂಬರ್: ಪದೇ ಪದೇ ದಾಳಿಗಳಿಂದ ಕಂಗೆಟ್ಟಿರುವ ಕುಂದುಜ್ ನಗರದಲ್ಲಿ ಭದ್ರತಾ ಪಡೆಗಳು ನಗರದ ಹೊರವಲಯದಲ್ಲೇ ಕೆಲ ವರ್ಷಗಳಿಂದ ತೀವ್ರ ತಪಾಸಣೆ ಕೈಗೊಳ್ಳುತ್ತಿವೆ. ಹೀಗಾಗಿ ಉಗ್ರರಿಗೆ ಸ್ಫೋಟಕ ಪದಾರ್ಥ ಸಾಗಿಸುವುದು ಬಹಳ ಕಷ್ಟವಾಗಿದೆ. ಈ ನಡುವೆ ಎರಡು ದಿನಗಳ ಹಿಂದೆ ಕೂಡಾ ವಾಹನವೊಂದರಲ್ಲಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಗುಂಪೊಂದನ್ನು ಭದ್ರತಾ ಪಡೆಗಳು ಎಂದಿನಂತೆ ತಪಾಸಣೆ ನಡೆಸಿದ್ದವು.

ಈ ವೇಳೆ 4 ತಿಂಗಳ ಮಗುವಿನ ದೇಹಕ್ಕೆ ಸ್ಫೋಟಕಗಳನ್ನು ಸುತ್ತಿ, ಅದು ಕಾಣದಂತೆ ಬಟ್ಟೆ ಹಾಕಿ ಅದರ ಮೇಲೆ ಸ್ವೆಟರ್ ಹಾಕಿರುವ ಸ್ಪೋಟಕ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಸೇರಿದಂತೆ 5 ಜನರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಗೆ ಗುರಿಪಡಿಸಿವೆ. ಈ ಹಿಂದೆ ಕೂಡಾ ತಾಲಿಬಾನ್ ಉಗ್ರರು 7-8 ವಯಸ್ಸಿನ ಮಕ್ಕಳನ್ನು ಆತ್ಮಾಹುತಿ ದಾಳಿಗೆ ಬಳಸಿಕೊಂಡಿದ್ದ ಉದಾಹರಣೆ ಇದೆಯಾದರೂ, 4 ತಿಂಗಳ ಮಗುವಿನ ದೇಹಕ್ಕೆ ಸ್ಫೋಟಕ ಸುತ್ತಿ ಅದನ್ನೇ ಉಗ್ರ ಕೃತ್ಯಕ್ಕೆ ಬಳಸಿಕೊಂಡ ಮೊದಲ ಪ್ರಕರಣ ಇದೆನ್ನಲಾಗಿದೆ.

Follow Us:
Download App:
  • android
  • ios