ಹೊಸವರ್ಷಕ್ಕೆ ಸಂಸತ್ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವ ಬಗ್ಗೆ ಇದೀಗ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ನವದೆಹಲಿ (ಡಿ.30): ಹೊಸವರ್ಷಕ್ಕೆ ಸಂಸತ್ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವ ಬಗ್ಗೆ ಇದೀಗ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ಭಯೋತ್ಪಾದಕ ಸಂಘಟನೆಗಳು ಕೃತ್ಯ ಸಗಲು ಸಜ್ಜಾಗಿವೆ ಎಂದು ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ ಬಹಿರಂಗವಾಗಿದೆ. ಲಷ್ಕರ್ -ಇ-ತೊಯ್ಬಾ, ಜೈಷ್ -ಎ-ಮೊಹಮದ್ ಉಗ್ರ ಸಂಘಟನೆಗಳು ಸಂಸತ್ ಮೇಲೆ ಜಂಟಿ ದಾಳಿಗೆ ಸಜ್ಜಾಗಿವೆ.
ಆದರೆ ಈಗಾಗಲೇ ದೇಶದಾದ್ಯಂತ ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಉಗ್ರ ಸಯೀದ್ ಮತ್ತು ಮಸೂದ್ ಅಜರ್ ನೇತೃತ್ವದ ಉಗ್ರ ಸಂಘಟನೆಗಳು 2001, ಡಿ.13ರಂದು ಸಂಸತ್ ಮೇಲೆ ಉಗ್ರರು ದಾಳಿ ನಡೆಸಿದ್ದರು.
