ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದ್ದು, ಇನ್ನುಳಿದ ಉಗ್ರರ ಬೇಟೆಗಾಗಿ ಭದ್ರತಾ ಪಡೆಗಳು ನಾಕಾಬಂದಿ ಹಾಕಿವೆ. ನಾಥಿಪೋರಾ ಎಂಬಲ್ಲಿ ಪೊಲೀಸರು 5 ಕಿಲೋ ಎಲ್'ಇಡಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಎಸ್'ಎಫ್ ಕ್ಯಾಂಪ್'ನ ಕಟ್ಟಡವೊಂದರಲ್ಲಿ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆಂಬ ಮಾಹಿತಿಯನ್ನು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ(ಅ. 03): ಬಿಎಸ್'ಎಫ್ ಕ್ಯಾಂಪ್ ಮೇಲೆ ನಡೆದ ಉಗ್ರರು ದಾಳಿ ಎಸಗಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಉಗ್ರರು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಮೂರಕ್ಕೂ ಹೆಚ್ಚು ಬಿಎಸ್'ಎಫ್ ಜವಾನರಿಗೆ ಗಾಯಗಳಾಗಿವೆ. ಬಿಎಸ್'ಎಫ್'ನ ಎಎಸ್'ಎಐ ಅವರು ಬಲಿಯಾಗಿದ್ದಾರೆ.
ಇಲ್ಲಿಯ ಅಂತಾರಾಷ್ಟ್ರೀಯ ಏರ್'ಪೋರ್ಟ್'ಗೆ ಸಮೀಪದಲ್ಲೇ ಇದ್ದ 182ನೇ ಬಿಎಸ್'ಎಫ್ ಬೆಟಾಲಿಯನ್'ನ ಆಡಳಿತ ಸಂಕೀರ್ಣದ ಮೇಲೆ ಈ ದಾಳಿ ನಡೆದಿದೆ. ಪೊಲೀಸರ ಪ್ರಕಾರ ಭಯೋತ್ಪಾದಕರು ಆತ್ಮಹತ್ಯಾ ದಾಳಿ ಎಸಗಿರುವ ಶಂಕೆ ಇದೆ. ಆದರೆ, ಎಷ್ಟು ಮಂದಿ ಉಗ್ರರು ದಾಳಿ ಎಸಗಿದ್ದಾರೆಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದ್ದು, ಇನ್ನುಳಿದ ಉಗ್ರರ ಬೇಟೆಗಾಗಿ ಭದ್ರತಾ ಪಡೆಗಳು ನಾಕಾಬಂದಿ ಹಾಕಿವೆ. ನಾಥಿಪೋರಾ ಎಂಬಲ್ಲಿ ಪೊಲೀಸರು 5 ಕಿಲೋ ಎಲ್'ಇಡಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಎಸ್'ಎಫ್ ಕ್ಯಾಂಪ್'ನ ಕಟ್ಟಡವೊಂದರಲ್ಲಿ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆಂಬ ಮಾಹಿತಿಯನ್ನು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ಸಭೆ ಕರೆದಿದ್ದು ಮುಂದಿನ ಕಾರ್ಯಾಚರಣೆಯ ಕುರಿತು ಚರ್ಚೆ ನಡೆಸಿದ್ದಾರೆ. ಇದೇ ವೇಳೆ, ಶ್ರೀನಗರ ಏರ್'ಪೋರ್ಟ್'ನಲ್ಲಿ ವಿಮಾನ ಹಾರಾಟಗಳ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಡೆ ಭದ್ರತೆ ಬಿಗಿಗೊಳಿಸಲಾಗಿದೆ.