ಹೈದರಾಬಾದ್‌:  ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿವಾದಿತ ತೆಲುಗು ಚಿತ್ರ ವಿಮರ್ಶಕ ಕಾರ್ತಿ ಮಹೇಶ್‌ರನ್ನು ಹೈದರಾಬಾದ್‌ನಿಂದ ಆರು ತಿಂಗಳು ಗಡಿಪಾರು ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಪೊಲೀಸರು ಕಾರ್ತಿ ಅವರನ್ನು ಪಕ್ಕದ ಆಂಧ್ರಪ್ರದೇಶದ ತಮ್ಮ ತವರು ಜಿಲ್ಲೆ ಚಿತ್ತೂರುಗೆ ಸ್ಥಳಾಂತರಿಸಿದ್ದಾರೆ. ಶ್ರೀರಾಮ ವಂಚಕ. 

ಸೀತೆ ಶ್ರೀರಾಮನನ್ನು ಮದುವೆಯಾಗುವ ಬದಲು ರಾವಣನನ್ನು ವರಿಸಿದ್ದರೆ ಚೆನ್ನಾಗಿತ್ತು ಎಂದು ಹಲವು ಸಂದರ್ಶನಗಳಲ್ಲಿ ಮಹೇಶ್‌ ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಾರ್ತಿಯನ್ನು ಹೈದ್ರಾಬಾದ್‌ ಮಿತಿಯಿಂದ 6 ತಿಂಗಳು ಗಡಿಪಾರು ಮಾಡಿದ್ದಾರೆ. 

ಆದರೆ ಆಂಧ್ರಪ್ರದೇಶದಲ್ಲೂ ಕಾರ್ತಿ ವಿರುದ್ಧ ಪ್ರತಿಭಟನೆ ನಡೆಯುವ ಸಾಧ್ಯತೆಯಿರುವುದರಿಂದ ಅವರನ್ನು ಅಲ್ಲಿಂದಲೂ ಬೇರೆ ರಾಜ್ಯಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ.