ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿ ನಂದಮುರಿ ಹರಿಕೃಷ್ಣ ವಿಧಿವಶರಾಗಿದ್ದಾರೆ.
ಹೈದರಾಬಾದ್ (ಆ. 29): ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿ ನಂದಮುರಿ ಹರಿಕೃಷ್ಣ ವಿಧಿವಶರಾಗಿದ್ದಾರೆ. ಆಂಧ್ರ ಮಾಜಿ ಸಿಎಂ ಎನ್ಟಿಆರ್ ಹಿರಿಯ ಪುತ್ರ ಇವರು. ಸೀತಯ್ಯ, ಸೀತಾರಾಮು, ಸಿವರಾಮ ರಾಜು, ಟೈಗರ್ ಹರಿಶ್ಚಂದ್ರ ಪ್ರಸಾದ್ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
"
ನಲಗುಂಡ ಬಳಿಯ ರಸ್ತೆಯಲ್ಲಿ ಹರಿಕೃಷ್ಣ ಸೇರಿದಂತೆ ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮುಗುಚಿ ಬಿದ್ದು ಹರಿಕೃಷ್ಣ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ನಾರ್ಕಟ್ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ನೆಲ್ಲೂರಿನಲ್ಲಿ ನಡೆದ ಅಭಿಮಾನಿಯ ಮದುವೆಯಲ್ಲಿ ಭಾಗವಹಿಸಿ ಹೈದರಾಬಾದ್ಗೆ ವಾಪಸ್ಸಾಗುವಾಗ ಈ ದುರ್ಘಟನೆ ನಡೆದಿದೆ. ವಿಷಯ ತಿಳಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದಾರೆ.
ಸಾವಿಗೂ ಮುನ್ನ ಹರಿಕೃಷ್ಣ ಮಾನವಿಯತೆ ಮೆರೆದ ಧೀಮಂತ
ಸೆಪ್ಟೆಂಬರ್ 2 ರಂದು ತನ್ನ ಹುಟ್ಟು ಹಬ್ಬದ ದಿನ ತನ್ನ ಅಭಿಮಾನಿಗಳು ವ್ಯರ್ಥ ವಾಗಿ ಕೇಕ್,ಬ್ಯಾನರ್, ಸಂಭ್ರಮ ದ ದುಂಡು ವೆಚ್ಚ ಹಣ ಖರ್ಚುಗಳನ್ನು ಮಾಡಬೇಡಿ. ಅದೇ ಖರ್ಚು ಹಣವನ್ನು ಕೇರಳ,ಕೊಡಗು ನೆರೆಸಂತ್ರಸ್ಥರಿಗೆ ಧನ ಸಹಾಯ ಮಾಡಿ ಅದೇ ನೀವು ನನ್ನ ಹುಟ್ಟು ಹಬ್ಬಕ್ಕೆ ಸಲ್ಲಿಸುವ ಪ್ರೀತಿ ಎಂದು ತನ್ನ ಅಭಿಮಾನಿಗಳಿ ಸ್ವತಃ ಹರಿಕೃಷ್ಣ ರೇ ಕೈ ಬರಹದಿಂದ ಪತ್ರ ಬರೆದಿದ್ದಾರೆ.

