ಬೆರಳಚ್ಚು ಮೂಲಕ ಆಧಾರ್‌ ದೃಢೀಕರಣ ಮಾಡುವುದಕ್ಕೆ ಮೊಬೈಲ್‌ ಕಂಪನಿಗಳಿಗೆ ಸರ್ಕಾರ ನಿರ್ಬಂಧ ಹೇರಿದಂತಾಗಿದೆ. ಆದರೆ, ಚಂದಾದಾರರು ತಮ್ಮ ವಿಳಾಸ ಹಾಗೂ ಗುರುತು ದೃಢೀಕರಣಕ್ಕಾಗಿ ಆಧಾರ ಕಾರ್ಡನ್ನು ಕಂಪನಿಗಳಿಗೆ ಸ್ವಯಂಪ್ರೇರಿತವಾಗಿ ನೀಡಬಹುದು

ನವದೆಹಲಿ: ಇತ್ತೀಚಿನ ಸುಪ್ರೀಂ ಕೋರ್ಟ್‌ ಆದೇಶಾನುಸಾರ ಯಾವುದೇ ಟೆಲಿಕಾಂ ಕಂಪನಿಗಳು ಹಾಲಿ ಮೊಬೈಲ್‌ ಚಂದಾದಾರರು ಹಾಗೂ ಹೊಸ ಚಂದಾದಾರರಿಗೆ ‘ಆಧಾರ್‌ ದೃಢೀಕರಣ’ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. 

ಇದರಿಂದಾಗಿ ಬೆರಳಚ್ಚು ಮೂಲಕ ಆಧಾರ್‌ ದೃಢೀಕರಣ ಮಾಡುವುದಕ್ಕೆ ಮೊಬೈಲ್‌ ಕಂಪನಿಗಳಿಗೆ ಸರ್ಕಾರ ನಿರ್ಬಂಧ ಹೇರಿದಂತಾಗಿದೆ.

ಆದರೆ, ಚಂದಾದಾರರು ತಮ್ಮ ವಿಳಾಸ ಹಾಗೂ ಗುರುತು ದೃಢೀಕರಣಕ್ಕಾಗಿ ಆಧಾರ ಕಾರ್ಡನ್ನು ಕಂಪನಿಗಳಿಗೆ ಸ್ವಯಂಪ್ರೇರಿತವಾಗಿ ನೀಡಬಹುದು. ಕಂಪನಿಗಳು ಕಾರ್ಡನ್ನು ಸ್ವೀಕರಿಸಬಹುದು. ಆದರೆ ಬೆರಳಚ್ಚು ದೃಢೀಕರಣ ಮಾಡಿಕೊಳ್ಳುವಂತಿಲ್ಲ ಎಂದು ಶುಕ್ರವಾರ ಸರ್ಕಾರ ಆದೇಶಿಸಿದೆ.

ಇದೇ ವೇಳೆ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧರಾಗಿರುವುದಾಗಿ ಸರ್ಕಾರಕ್ಕೆ ಮೊಬೈಲ್‌ ಕಂಪನಿಗಳು ಅನುಸರಣಾ ಪತ್ರ ನೀಡಬೇಕು ಸೂಚಿಸಲಾಗಿದೆ.