ನಿನ್ನೆ [ಮಂಗಳವಾರ] ಅಷ್ಟೇ  ಟಿಆರ್​ಎಸ್​ ಪಕ್ಷದ ತೊರೆದಿದ್ದ ಹಾಲಿ ಸಂಸದ ಇಂದು [ಬುಧವಾರ] ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ನವದೆಹಲಿ,(ನ.21): ತೆಲಂಗಾಣ ವಿಧಾಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರಿದೆ. ಈ ಮಧ್ಯೆ ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ [ಟಿಆರ್ ಸಿ]ಯ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ ಪಕ್ಷ ತೊರೆದಿದ್ದಾರೆ.

ಇದೇ ಡಿಸೆಂಬರ್ 7 ರಂದು ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅವರು ಈಗ ಟಿಆರೆಸ್ಸ್ ತೊರೆದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಟಿಆರ್ ಎಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.

ಸಿದ್ದರಾಮಯ್ಯ, ಡಿಕೆಶಿಗೆ ಹೊಸ ಟಾಸ್ಕ್ ಕೊಟ್ಟ ಕೈ ಹೈಕಮಾಂಡ್!

ಪಕ್ಷ ತೊರೆದಿರುವ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ವದಂತಿಗಳು ಹಬ್ಬಿದ್ದವು. ಆದ್ರೆ, ಇಂದು [ಬುಧಾವರ] ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದು, ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. 

 ನಿನ್ನೆ [ಮಂಗಳವಾರ] ಟಿಆರ್ ಎಸ್ ಪಕ್ಷವನ್ನು ತೊರೆದಿದ್ದ ಅವರು ಈಗ ತಮ್ಮ ಲೋಕಸಭಾ ಸ್ಥಾನಕ್ಕೂ ಕೂಡ ರಾಜೀನಾಮೆ ನೀಡುವ ಸಾಧ್ಯತೆಯಿದೆ.