ಪೂಜಾ ಕೈಂಕರ್ಯ ಕೈಗೊಳ್ಳುವ ಅರ್ಚಕರಿಗೆ ಸರ್ಕಾರಿ ನೌಕರರಿಗೆ ನೀಡಲಾಗುವ ಮೊತ್ತದ ವೇತನ ನೀಡಲಾಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡುವ ಪ್ರತೀ ಸಂದರ್ಭದಲ್ಲಿಯೂ, ಅರ್ಚಕರ ವೇತನವನ್ನೂ ಪರಿಷ್ಕರಿಸಲಾಗುತ್ತದೆ. 

ಹೈದರಾಬಾದ್‌: ರಾಜ್ಯದಲ್ಲಿನ ಎಸ್‌ಸಿ, ಎಸ್‌ಟಿ, ಅರ್ಚಕರು, ಇಮಾಮ್‌ಗಳಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಕೆಲವು ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಈ ಪ್ರಕಾರ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಗೃಹಬಳಕೆಯ ಉಚಿತ ವಿದ್ಯುತ್‌ ಅನ್ನು 50 ಯುನಿಟ್‌ನಿಂದ 101 ಯುನಿಟ್‌ಗೆ ವಿಸ್ತರಿಸಲಾಗಿದೆ. ಇನ್ನು, ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳುವ ಅರ್ಚಕರಿಗೆ ಸರ್ಕಾರಿ ನೌಕರರಿಗೆ ನೀಡಲಾಗುವ ಮೊತ್ತದ ವೇತನ ನೀಡಲಾಗುತ್ತದೆ.

ಅಲ್ಲದೆ, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡುವ ಪ್ರತೀ ಸಂದರ್ಭದಲ್ಲಿಯೂ, ಅರ್ಚಕರ ವೇತನವನ್ನೂ ಪರಿಷ್ಕರಿಸಲಾಗುತ್ತದೆ. ಇದರ ಜೊತೆಗೆ, ಅರ್ಚಕರ ನಿವೃತ್ತಿ ವಯೋಮಿತಿಯನ್ನು 58 ವರ್ಷದ ಬದಲಿಗೆ 62ಕ್ಕೆ ವಿಸ್ತರಿಸಲಾಗುತ್ತದೆ. ಇನ್ನು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಇಮಾಮ್‌ಗಳು ಹಾಗೂ ಮೌಜಾಮ್‌ಗಳಿಗೆ ಸೆಪ್ಟೆಂಬರ್‌ನಿಂದಲೇ ಅನ್ವಯವಾಗುವಂತೆ ಪ್ರತೀ ತಿಂಗಳು 5000 ರು. ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.