ವಾಹನದಲ್ಲಿ ರಿವಾಲ್ವರ್ ಮತ್ತು ಮದ್ಯ ಇಟ್ಟುಕೊಂಡಿದ್ದ ಕಾರಣಕ್ಕಾಗಿ ಇಲ್ಲಿನ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ತೆಲಂಗಾಣದ 6 ಮಂದಿ ಯಾತ್ರಿಗಳನ್ನು ಬಂಧಿಸಲಾಗಿದೆ.
ಶಬರಿಮಲೆ (ಡಿ.25): ವಾಹನದಲ್ಲಿ ರಿವಾಲ್ವರ್ ಮತ್ತು ಮದ್ಯ ಇಟ್ಟುಕೊಂಡಿದ್ದ ಕಾರಣಕ್ಕಾಗಿ ಇಲ್ಲಿನ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ತೆಲಂಗಾಣದ 6 ಮಂದಿ ಯಾತ್ರಿಗಳನ್ನು ಬಂಧಿಸಲಾಗಿದೆ.
ಪಂಪಾ ಬಳಿಯ ಟೋಲ್ ಗೇಟ್‌ನಲ್ಲಿ ತಪಾಸಣೆಯ ವೇಳೆ ಯಾತ್ರಿಕರಿಂದ 1 ಗನ್ ಮತ್ತು 4 ಮದ್ಯದ ಬಾಟಲಿ ವಶಪಡಿಸಿಕೊಳ್ಳಲಾಗಿದೆ. ಭಕ್ತಾದಿಗಳ ಬಳಿ ಗನ್ ಲೈಸೆನ್ಸ್ ಇದ್ದರೂ, ಶಬರಿಮಲೆ ಸುತ್ತಮುತ್ತಲಿನ ಬಿಗಿ ಭದ್ರತೆಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ನಿಷೇಧಿಸಲಾಗಿದೆ. ಹೀಗಾಗಿ ಆರೋಪಿಗಳ ವಿರುದ್ಧ ಕೇರಳ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
