ಹೈದರಾಬಾದ್[ಜೂ.20]: ನಿತ್ಯ ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ಹಾಗೂ ಕಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಅಭಿಮಾನಿಗಳು ನೆಚ್ಚಿನ ಚಿತ್ರ ನಟರ ಸಿನಿಮಾ ಬಿಡುಗಡೆಯಾದಾಗ ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ ಮಾಡೋದನ್ನ ನೋಡಿದ್ದೇವೆ. ಆದರೆ, ತೆಲಂಗಾಣ ಮೂಲದ ಬುಸ್ಸಾ ಕೃಷ್ಣ ಎಂಬುವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 6 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಿದ್ದಾರೆ.

ಅಲ್ಲದೆ, ಹಿಂದೂ ದೇವರಂತೆ ಹಣೆ ಮೇಲೆ ತಿಲಕವನ್ನಿಟ್ಟು, ಹಾಲಿನ ಅಭಿಷೇಕ ಮಾಡಿ ಟ್ರಂಪ್ ಅವರ ಹುಟ್ಟುಹಬ್ಬವನ್ನು ಜೂ.14ಕ್ಕೆ ಆಚರಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.