Asianet Suvarna News Asianet Suvarna News

ಕಾಂಗ್ರೆಸ್‌ ಅಧ್ಯಕ್ಷ ಇನ್ನೂ 5 ವರ್ಷ ಗಡ್ಡ ಬೋಳಿಸುವಂತಿಲ್ಲ!

ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ಇನ್ನೂ 5 ವರ್ಷ ಗಡ್ಡ ಬೋಳಿಸುವಂತಿಲ್ಲ! ಕಾಂಗ್ರೆಸ್‌ ಗೆಲ್ಲೋವರೆಗೂ ಶೇವ್‌ ಮಾಡಲ್ಲ ಎಂದಿದ್ದ ಉತ್ತಮ್‌ ರೆಡ್ಡಿ| ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲು: ಗಡ್ಡಕ್ಕೆ ಮುಕ್ತಿ ಇಲ್ಲ

Telangana Congress chief s wait to shave beard just got longer
Author
Telangana, First Published Dec 13, 2018, 8:57 AM IST

ಹೈದರಾಬಾದ್‌[ಡಿ.13]: ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ಉತ್ತಮ್‌ ಕುಮಾರ್‌ ರೆಡ್ಡಿ ಅವರ ಗಡ್ಡಕ್ಕೆ ಇನ್ನೂ ಐದು ವರ್ಷಗಳ ಕಾಲ ಮುಕ್ತಿ ಸಿಗದಂತಾಗಿದೆ.

2016ರಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಉತ್ತಮ್‌ ರೆಡ್ಡಿ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರುವವರೆಗೂ ಗಡ್ಡ ಬೋಳಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್‌ ಕಳಪೆ ಪ್ರದರ್ಶನ ತೋರಿದೆ. ಹೀಗಾಗಿ ಉತ್ತಮ್‌ ಅವರು ಇನ್ನೂ 5 ವರ್ಷ ಗಡ್ಡವನ್ನು ತೆಗೆಸದಂತಾಗಿದೆ.

ತೆಲಂಗಾಣದಲ್ಲಿ ನಡೆಯಲಿಲ್ಲ ಡಿಕೆಶಿ ಆಟ: ಟ್ರಬಲ್ ಶೂಟರ್ ಆಸೆಗೆ KCR ತಣ್ಣೀರು!

ಮೂಲತಃ ವಾಯುಪಡೆ ಪೈಲಟ್‌ ಆಗಿದ್ದ ಉತ್ತಮ್‌ ಕುಮಾರ್‌ ರೆಡ್ಡಿ ಅವರು ಈ ಮೊದಲೆಲ್ಲಾ ಶೇವ್‌ ಮಾಡದೇ ಕಾಣಿಸಿಕೊಳ್ಳುತ್ತಿರಲಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತದೆ ಎಂಬ ಅದಮ್ಯ ವಿಶ್ವಾಸದಲ್ಲಿ ಶಪಥ ಮಾಡಿದ್ದ ಅವರು ಎರಡು ವರ್ಷಗಳಿಂದ ಗಡ್ಡವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಟಿಆರ್‌ಎಸ್‌ ಅಬ್ಬರದ ನಡುವೆಯೂ ಅವರು 8200 ಮತಗಳ ಅಂತರದಿಂದ ಗೆದ್ದು ಬಂದಿದ್ದಾರೆ. ಆದರೆ ಅವರ ಪತ್ನಿ 200 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಹೀಗಾಗಿ ಉತ್ತಮ್‌ ರೆಡ್ಡಿ ಅವರಿಗೆ ತೀವ್ರ ನಿರಾಶೆಯಾಗಿದೆ.

ಪೈಲಟ್‌ ಆಗಿದ್ದಾಗ ಮಿಗ್‌-21 ಹಾಗೂ ಮಿಗ್‌-23 ವಿಮಾನಗಳನ್ನು ಅವರು ಚಾಲನೆ ಮಾಡಿದ್ದರು. ರಾಷ್ಟ್ರಪತಿಗಳಿಗೂ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ಮೂರು ರಾಜ್ಯ ಗೆದ್ದರೂ ಕಾಂಗ್ರೆಸ್ ಗೆ ಮತಯಂತ್ರದ ಮೇಲೆ ಡೌಟ್

ಸೋಲಿನ ಆಘಾತಕ್ಕೆ ಇಬ್ಬರು ರಾಜಕಾರಣಿಗಳು ಆಸ್ಪತ್ರೆಗೆ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆಘಾತದಿಂದ ಇಬ್ಬರು ಅಭ್ಯರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ವಿರುದ್ಧದ ಅನ್ಯ ಪಕ್ಷದ ಅಭ್ಯರ್ಥಿಗಳ ವಿರುದ್ಧದ ಸೋಲಿನ ಆಘಾತದಿಂದ ಅನಾರೋಗ್ಯಕ್ಕೀಡಾದ ನಲ್ಗೊಂಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೊಮತಿರೆಡ್ಡಿ ವೆಂಕಟ್‌ ರೆಡ್ಡಿ ಹಾಗೂ ಪಲೇರ್‌ ಕ್ಷೇತ್ರದ ಟಿಆರ್‌ಎಸ್‌ ಅಭ್ಯರ್ಥಿ ತುಮ್ಮಲ ನಾಗೇಶ್ವರ ರಾವ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೆಂಕಟ್‌ ರೆಡ್ಡಿ ಅವರು ಟಿಆರ್‌ಎಸ್‌ನ ಕಂಚರ್ಲಾ ಭೂಪಾಲ್‌ ರೆಡ್ಡಿ ಎದುರು 8633 ಮತಗಳ ಅಂತರದಿಂದ ಸೋಲುಂಡಿದ್ದರು. ಹಾಗೆಯೇ, ಮಾಜಿ ಸಚಿವ ತುಮ್ಮಲಾ ಅವರು ಕಾಂಗ್ರೆಸ್‌ನ ಕಂದಲಾ ಉಪೇಂದ್ರ ರೆಡ್ಡಿ ವಿರುದ್ಧ 7669 ಮತಗಳ ಅಂತರದಿಂದ ಸೋತಿದ್ದರು.

Follow Us:
Download App:
  • android
  • ios