ಪ್ರಧಾನಿ ನರೇಂದ್ರ ಮೋದಿ ಇಂತಹ ಒಂದು ರೋಗವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರು ಹೇಳಿದ್ದಾರೆ.

ಹೈದ್ರಾಬಾದ್ : ಹಿಂದೂ-ಮುಸ್ಲಿಂ ರೋಗ’ ಇದೆ. ಇದರಿಂದ ಇತರರಿಗೆ ‘ಜಾತಿಯ ಹುಚ್ಚು’ ಹಿಡಿಯುತ್ತದೆ ಎಂದು ತೆಲಂಗಾಣದ ಸಿಎಂ ಚಂದ್ರಶೇಖರ ರಾವ್ ಆರೋಪಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿ ಹಾಗೂ ಬಿಜೆಪಿಗೆ ಒಂದು ರೋಗವಿದೆ.

ಅದು ಹಿಂದೂ-ಮುಸ್ಲಿಂ ವಿಭಜಿಸುವ ರೋಗ. ಹೀಗಾಗಿಯೇ ಬಿಜೆಪಿಯವರು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಮರಿಗೆ ಮೀಸಲಾತಿ ಸಿಗದಂತೆ ತಡೆ ಒಡ್ಡಿದ್ದಾರೆ. ಪ್ರತಿಯೊಂದರಲ್ಲೂ ಅವರು ಹಿಂದೂ-ಮುಸ್ಲಿಂ ಎಂದು ವಿಭಜಿಸುತ್ತಾರೆ’ ಎಂದು ಟೀಕಿಸಿದರು.