ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರ : ಕರ್ನಾಟಕ ನಂ 7

Telangana 2nd, AP 4th most corrupt states: Survey
Highlights

ಭ್ರಷ್ಟಾಚಾರ ಹತ್ತಿಕ್ಕಲು ಅನೇಕ ಕ್ರಮ ಗಳನ್ನು ಕೈಗೊಂಡಿರುವುದಾಗಿ ಸರ್ಕಾರಗಳು ಎಷ್ಟೇ ಹೇಳಿಕೊಂಡರೂ ಆ ಪಿಡುಗು  ಕಡಿಮೆಯಾಗಿಲ್ಲ ಎಂಬ ಸಂಗತಿ ಮತ್ತೊಮ್ಮೆ ಹೊರಬಿದ್ದಿದೆ. ಖಾಸಗಿ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕ ಭ್ರಷ್ಟಾಚಾರ ವಿಷಯದಲ್ಲಿ ದೇಶ ದಲ್ಲೇ ಏಳನೇ ರ‌್ಯಾಂಕ್ ಪಡೆದಿದೆ. 
 

ಹೈದರಾಬಾದ್ (ಮೇ  19): ಭ್ರಷ್ಟಾಚಾರ ಹತ್ತಿಕ್ಕಲು ಅನೇಕ ಕ್ರಮ ಗಳನ್ನು ಕೈಗೊಂಡಿರುವುದಾಗಿ ಸರ್ಕಾರಗಳು ಎಷ್ಟೇ ಹೇಳಿಕೊಂಡರೂ ಆ ಪಿಡುಗು  ಕಡಿಮೆಯಾಗಿಲ್ಲ ಎಂಬ ಸಂಗತಿ ಮತ್ತೊಮ್ಮೆ ಹೊರಬಿದ್ದಿದೆ. ಖಾಸಗಿ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕ ಭ್ರಷ್ಟಾಚಾರ ವಿಷಯದಲ್ಲಿ ದೇಶ ದಲ್ಲೇ ಏಳನೇ ರ‌್ಯಾಂಕ್ ಪಡೆದಿದೆ. 

ತಮಿಳುನಾಡು ಪ್ರಥಮ ಸ್ಥಾನದಲ್ಲಿದ್ದರೆ, ತೆಲಂಗಾಣ 2 ಹಾಗೂ ಆಂಧ್ರಪ್ರದೇಶ ೪ನೇ ಸ್ಥಾನದಲ್ಲಿವೆ. ಅದನ್ನು ಗಣನೆಗೆ ತೆಗೆದುಕೊಂಡರೆ, ಕರ್ನಾಟಕ ಸ್ಥಿತಿಯೇ ಪರವಾಗಿಲ್ಲ ಎನ್ನುವಂತಾಗಿದೆ. ‘ಸಿಎಂಎಸ್- ಇಂಡಿಯಾ ಕರಪ್ಷನ್ ಸ್ಟಡಿ 2018’ ಎಂಬ ವರದಿಯಲ್ಲಿ ಈ ಅಂಶವಿದೆ. ಸಾರ್ವಜನಿಕ ಸೇವೆಗಳ ವಿತರಣಾ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಕಳಪೆ ಸಾಧನೆ ತೋರಿದ್ದನ್ನು ಗಮನಿಸಿ ರ್ಯಾಕಿಂಗ್ ನೀಡಲಾಗಿದೆ ಎಂದು ಸಂಸ್ಥೆಯ ಅಲೋಕ್ ಶ್ರೀವಾಸ್ತವ ತಿಳಿಸಿದ್ದಾರೆ.

ಸರ್ಕಾರಿ ಸೇವೆಗಳನ್ನು ಪಡೆಯಲು ಲಂಚಕ್ಕೆ ಬೇಡಿಕೆ ಬಂದಿದೆ ಅಥವಾ ಮಧ್ಯವರ್ತಿ ಗಳನ್ನು ಬಳಸಿಕೊಳ್ಳಬೇಕಾದ ಸ್ಥಿತಿ ಯಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಕರ್ನಾಟಕದ ಶೇ.36 ರಷ್ಟು ಮಂದಿ ತಿಳಿಸಿದ್ದಾರೆ. ಆದರೆ ಈ ರೀತಿ ನುಡಿದವರ ಪ್ರಮಾಣ ತೆಲಂಗಾಣದಲ್ಲಿ ಶೇ.73 ಹಾಗೂ ತಮಿಳುನಾಡಿನಲ್ಲಿ ಶೇ.೩೮ರಷ್ಟಿದೆ ಎಂದು ವರದಿ ಹೇಳುತ್ತದೆ.

13 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ ವೇಳೆ, ಸಮೀಕ್ಷೆಯಲ್ಲಿ ಅಭಿಪ್ರಾಯ ನೀಡಿದ ಜನ ತಾವು ಕಳೆದ ವರ್ಷ ಭರ್ಜರಿ ಒಟ್ಟಾರೆ ೨೮೦೦ ಕೋಟಿ ರು.ನಷ್ಟು ಹಣವನ್ನು ಲಂಚವಾಗಿ ನೀಡಿದ್ದಾಗಿ ಹೇಳಿದ್ದಾರೆ.

loader