ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಜೀವನದಲ್ಲಿ 2019 ಮಹತ್ವದ ವರ್ಷವಾಗುವ ಬಗ್ಗೆ ಸುಳಿವು ನೀಡಿದ್ದಾರೆ. 

ಪಾಟ್ನಾ : ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಜೀವನದಲ್ಲಿ 2019 ಮಹತ್ವದ ವರ್ಷವಾಗುವ ಬಗ್ಗೆ ಸುಳಿವು ನೀಡಿದ್ದಾರೆ. 

2019ರಲ್ಲಿ ಲೋಕಸಭಾ ಚುನಾವಣೆಯೂ ನಡೆಯುತ್ತಿದ್ದು ಇದೇ ವೇಳೆ ತೇಜಸ್ವಿ ವಿವಾಹವೂ ಕೂಡ ನಡೆಯುತ್ತದೆ ಎನ್ನುವ ಬಗ್ಗೆಯೂ ಅವರು ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ.

ಡಿಸೆಂಬರ್ ವೇಳೆಗೆ ಆರ್ ಜೆಡಿಯಿಂದ ಮಹಾ ರ್ಯಾಲಿಯನ್ನು ನಡೆಸಲಾಗುತ್ತಿದೆ. ಇನ್ನು ಅಕ್ಟೋಬರ್ 6 ರಂದು ಸಂವಿಧಾನ ಬಚಾವೋ ನ್ಯಾಯ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಇನ್ನು ಮೋಸ್ಟ್ ಹ್ಯಾಂಡ್ ಸಮ್ ತೇಜಸ್ವಿ ಯಾದವ್ ಅವರಿಗೆ ಈಗಾಗಲೇ ಅನೇಕ ಮದುವೆ ಪ್ರಪೋಸಲ್ ಗಳು ಬರುತ್ತಿದ್ದು, ಚುನಾವಣೆ ಬಳಿಕವೇ ವಿವಾಹದ ಚಿಂತನೆ ನಡೆಸಲಾಗುವುದು ಎಂದು ಹೆಳಿದ್ದಾರೆ. 

ಇದೇ ವೇಳೆ ಸೀಟುಗಳ ಹಂಚಿಕೆ ಹಾಗೂ ಮಹಾ ಘಟಬಂಧನದ ಭಾಗವಾಗುವ ಬಗ್ಗೆಯೂ ಪ್ತಕ್ರಿಯಿಸಿದ ತೇಜಸ್ವಿ ಯಾದವ್ ಅವರವರ ಗೆಲ್ಲುವ ಸಾಮರ್ಥ್ಯಕ್ಕೆ ಅನುಗುಣವಾಗಿ ಸೀಟು ಹಂಚಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.