ಹೊಸವರ್ಷದ ಮೊದಲ ದಿನದಂದು ತೇಜ್ ಪ್ರತಾಪ್ ಯಾದವ್, ಕೃಷ್ಣನಂತೆ ವೇಷ ಧರಿಸಿ, ತಲೆಯಲ್ಲಿ ಕೆಂಪು ಪೇಟ ತೊಟ್ಟು, ಕೊಳಲನ್ನು ಊದಿ ಅಚ್ಚರಿ ಮೂಡಿಸಿದ್ದಾರೆ
ಪಾಟ್ನಾ (ಜ.01): ರಾಷ್ಟ್ರೀಯ ಜನತಾ ದಳ (ಅರ್'ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಮುಖ್ಯಸ್ಥ ಪುತ್ರ ಹಾಗೂ ಬಿಹಾರದ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಕೃಷ್ಣನ ಅವತಾರ ತಾಳಿ ಆಚ್ಚರಿ ಮೂಡಿಸಿದ್ದಾರೆ.
ಹೊಸವರ್ಷದ ಮೊದಲ ದಿನದಂದು ತೇಜ್ ಪ್ರತಾಪ್ ಯಾದವ್, ಕೃಷ್ಣನಂತೆ ವೇಷ ಧರಿಸಿ, ತಲೆಯಲ್ಲಿ ಕೆಂಪು ಪೇಟ ತೊಟ್ಟು, ಕೊಳಲನ್ನು ಊದಿದ್ದಾರೆ.
ಬೃಂದಾವನದಲ್ಲಿ ಕೃಷ್ಣಭಕ್ತರೊಬ್ಬರು ನನಗಿದನ್ನು ಉಡುಗೊರೆಯಾಗಿ ಕೊಟ್ಟಿದ್ದರು, ಹಾಗೂ ಹೊಸವರ್ಷದಂದು ಧರಿಸುವಂತೆ ಹೇಳಿದ್ದರು, ಎಂದು ತೇಜಪ್ರತಾಪ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
