ದಲಿತರ ಮನೆಯಲ್ಲಿ ಸ್ನಾ ಮಾಡಿದ ಮಾಜಿ ಸಚಿವರೋರ್ವರು ತಾವು ಸ್ನಾನ ಮಾಡಿದ ಫೊಟೊಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. 

ಪಟನಾ: ರಾಷ್ಟ್ರೀಯ ಜನತಾ ದಳದ ಮುಖಂಡ ಮತ್ತು ಬಿಹಾರದ ಮಾಜಿ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಅವರು ಸೋಮವಾರ ದಲಿತ ಕುಟುಂಬದವರೊಬ್ಬರ ನಿವಾಸದಲ್ಲಿ ಸ್ನಾನ ಮಾಡಿದ್ದಾರೆ. 

ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ತೇಜ್‌ಪ್ರತಾಪ್‌ ಅವರು, ಕರ್ಹಾತಿಯಾ ಪಂಚಾಯತ್‌ಗೆ ಬರುವ ಗ್ರಾಮದ ದಲಿತ ಕುಟುಂಬವೊಂದರ ಮನೆಯಲ್ಲಿ ಸ್ನಾನ ಮಾಡಿದ್ದೇನೆ. 

ಇದೊಂದು ಹಿತಕರ ಅನುಭವ ನೀಡಿತು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಅದರ ಜತೆಗೆ, ತಾವು ಸ್ನಾನ ಮಾಡುತ್ತಿರುವ ಹಲವು ಫೋಟೊಗಳನ್ನು ಪ್ರಕಟಿಸಿದ್ದಾರೆ. 

ಇಡೀ ದಿನ ತಮ್ಮ ಕ್ಷೇತ್ರದ ವ್ಯಾಪ್ತಿಯ ಕರ್ಹಾತಿಯಾದಲ್ಲಿ ನಡೆದಾಡಿದ್ದೆ. ಹೀಗಾಗಿ ದಣಿವಾಗಿತ್ತು. ಪರಿಣಾಮ ಹ್ಯಾಂಡ್‌ಪಂಪ್‌ ನೋಡಿದಾಕ್ಷಣ ಸ್ನಾನ ಮಾಡಿದೆ ಎಂದು ತೇಜ್‌ ಹೇಳಿಕೊಂಡಿದ್ದಾರೆ.

Scroll to load tweet…