ಪಾಟ್ನಾ(ಜು.26): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಹಾರ ಸರ್ಕಾರ ವಿರುದ್ಧ ಹೋರಾಟ ರೂಪದಲ್ಲಿ, ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದವರೆಗೆ ಸೈಕಲ್ ಯಾತ್ರೆ ಹೊರಟಿದ್ದ ಆರ್‌ಜೆಡಿ ಯುವ ನಾಯಕ ತೇಜ್ ಪ್ರತಾಪ್ ಯಾದವ್ ಆಯತಪ್ಪಿ ಬಿದ್ದ ಘಟನೆ ನಡೆದಿದೆ. 

ತೇಜ್ ಪ್ರತಾಪ್ ವೇಗವಾಗಿ ಸೈಕಲ್ ಚಲಾಯಿಸಿದ್ದು ಸರ್ಕಲ್‌ವೊಂದರಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ.

ತೇಜ್ ಪ್ರತಾಪ್ ಬಿದ್ದ ಕೂಡಲೇ ಜೊತೆಯಲ್ಲಿ ಸಾಗುತ್ತಿದ್ದವರು, ಭದ್ರತಾ ಸಿಬ್ಬಂದಿಗಳು ನೆರವಿಗೆ ಧಾವಿಸಿದರೂ ಕೂಡಲೇ ಎದ್ದ ತೇಜ್ ಯಾತ್ರೆ ಮುಂದುವರಿಸಿದರು. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳಧ ವಿರುದ್ಧ ಜನಜಾಗೃತಿ ಮೂಡಿಸಲು ತೇಜ್ ಪ್ರತಾಪ್ ಸೈಕಲ್ ಯಾತ್ರೆ ಕೈಗೊಂಡಿದ್ದರು.