ಮಾರಣಾಂತಿಕ ಬ್ಲೂವೇಲ್ ಆಟ ಮತ್ತೊಂದು ಅಮಾಯಕ ವಿದ್ಯಾರ್ಥಿಯನ್ನು ಬಲಿಪಡೆದಿದೆ. ಆತಂಕದ ವಿಷಯವೆಂದರೆ ಇದುವರೆಗೆ, ಈ ಗೇಮ್'ನ ಪಾಶಕ್ಕೆ ಸಿಕ್ಕ ಹಲವು ವಿದ್ಯಾರ್ಥಿಗಳು ಕಟ್ಟಡದಿಂದ ಕೆಳಗೆ ಹಾರಿ ಇಲ್ಲವೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೆ, ಇದೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿಗೆ ಎದೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಮಾರಕ ಆಟದ ಮತ್ತಷ್ಟು ಕರಾಳ ಮುಖ ಬೆಳಕಿಗೆ ಬಂದಂತೆ ಆಗಿದೆ
ದಮೋಹ್(ಮಧ್ಯಪ್ರದೇಶ): ಮಾರಣಾಂತಿಕ ಬ್ಲೂವೇಲ್ ಆಟ ಮತ್ತೊಂದು ಅಮಾಯಕ ವಿದ್ಯಾರ್ಥಿಯನ್ನು ಬಲಿಪಡೆದಿದೆ. ಆತಂಕದ ವಿಷಯವೆಂದರೆ ಇದುವರೆಗೆ, ಈ ಗೇಮ್'ನ ಪಾಶಕ್ಕೆ ಸಿಕ್ಕ ಹಲವು ವಿದ್ಯಾರ್ಥಿಗಳು ಕಟ್ಟಡದಿಂದ ಕೆಳಗೆ ಹಾರಿ ಇಲ್ಲವೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೆ, ಇದೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿಗೆ ಎದೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಮಾರಕ ಆಟದ ಮತ್ತಷ್ಟು ಕರಾಳ ಮುಖ ಬೆಳಕಿಗೆ ಬಂದಂತೆ ಆಗಿದೆ.
ಇಂಥದ್ದೊಂದು ಘಟನೆ ಮಧ್ಯಪ್ರದೇಶದ ದಮೋಹ್'ನಲ್ಲಿ ನಡೆದಿದೆ. ‘ಕೆಲವು ದಿನಗಳಿಂದ ಬ್ಲೂವೇಲ್ ಆಟದ ಬಗ್ಗೆ ಪ್ರೇರೇಪಿತನಾಗಿದ್ದ ಫುಟೇರಾ ಮೂಲದ 12ನೇ ತರಗತಿ ಬಾಲಕ ಸಾತ್ವಿಕ್ ಪಾಂಡೆ, ಶನಿವಾರ ರಾತ್ರಿ ಬೈಕ್ ಅನ್ನು ರೈಲ್ವೆ ಕ್ರಾಸಿಂಗ್‌ನಲ್ಲಿ ಪಾರ್ಕ್ ಮಾಡಿ, ರೈಲ್ವೆ ಹಳಿಯತ್ತ ತೆರಳಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾನೆ. ಈ ದೃಶ್ಯಾವಳಿಗಳು ಇಲ್ಲಿನ ಸಿಸಿಟೀವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ‘ಭಾನುವಾರ ಬೆಳಗ್ಗೆ ರೈಲ್ವೆ ಹಳಿಯ ಮೇಲೆ ಬಾಲಕನ ಮೃತ ದೇಹ ಪತ್ತೆಯಾಗಿದೆ,’ ಎಂದು ಪೊಲೀಸರು ತಿಳಿಸಿದ್ದಾರೆ.
