ಪತ್ನಿ ಕೊಂದು 2 ದಿನ ಮೃತದೇಹದ ಜೊತೆಯಿದ್ದ ಟೆಕ್ಕಿ

news | Friday, May 25th, 2018
Suvarna Web Desk
Highlights

ನಿನ್ನೆ ರಾತ್ರಿ ಮನೆಗೆ ಕರೆಮಾಡಿ ತನ್ನ ನೀಚಕೃತ್ಯ ತಿಳಿಸಿದ ನಂತರ ತಾನೂ ಸಹ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯಆರೋಪಿ  ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಮೈಸೂರು(ಮೇ.25): ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿ ಮತ್ತು ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದ ಸಾಫ್ಟ್ ವೇರ್ ಇಂಜಿನಿಯರ್ ಪ್ರಜ್ವಲ್ ತನ್ನ ಪತ್ನಿ ಸವಿತಾ ಮಗಳು ಸಿಂಚನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಸ  ಬಳಿಕ ನಾಟಿ ಕೋಳಿ ಊಟ ಮಾಡಿ ಮದ್ಯಪಾನ ಮಾಡಿ ಎರಡು ರಾತ್ರಿ ಹೆಣಗಳ ಜೊತೆ ಕಳೆದಿದ್ದಾನೆ.ಸವಿತಾ ಸಹ ಸಾಫ್ಟ್'ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವನಿರ್ವಹಿಸುತ್ತಿದ್ದರು. ಇಬ್ಬರು ಪ್ರತ್ಯೇಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ನಿನ್ನೆ ರಾತ್ರಿ ಮನೆಗೆ ಕರೆಮಾಡಿ ತನ್ನ ನೀಚಕೃತ್ಯ ತಿಳಿಸಿದ ನಂತರ ತಾನೂ ಸಹ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯಆರೋಪಿ  ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.  ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 

Comments 0
Add Comment