ಸೂಸೈಡ್ ನೋಟ್ ಪ್ರಕಾರ, ಟೆಕ್ಕಿ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳೇ ಕಳೆದಿದ್ದರೂ ಮಕ್ಕಳಾಗಿರಲಿಲ್ಲ. ಹೀಗಾಗಿ, ಟೆಕ್ಕಿ ರಾಕೇಶ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಈ ಚಿಕಿತ್ಸೆಯ ವೈದ್ಯಕೀಯ ವರದಿಯ ಮಾಹಿತಿಯನ್ನ ಪತಿ ಸೊನಾಲಿ ವಾಟ್ಸಾಪ್ ಮೂಲಕ ತನ್ನ ಸ್ನೇಹಿತರು ಮತ್ತು ನೆಂಟರ ಜೊತೆ ಹಂಚಿಕೊಂಡಿದ್ದಳು. ಇದರಿಂದ ಮನನೊಂದ ಟೆಕ್ಕಿ ಹೆಂಡತಿಯನ್ನೂ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪುಣೆ(ಜ.21): 34 ವರ್ಷದ ಟೆಕ್ಕಿ ಹೆಂಡತಿಯ ಕುತ್ತಿಗೆ ಬಿಗಿದು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಹೆಂಡತಿ ವಾಟ್ಸಾಪ್`ನಲ್ಲಿ ತನ್ನ ವೈಯಕ್ತಿಕ ಮಾಹಿತಿಗಳನ್ನ ಶೇರ್ ಮಾಡಿದ್ದರಿಂದ ನೊಂದಿದ್ದ ಟೆಕ್ಕಿ ಈ ಕೃತ್ಯ ೆಸಗಿದ್ದಾನೆಂದು ಪೊಲೀಸರು ತಿಳಿಸಿದ್ಧಾರೆ.
ಪುಣೆಯ ಹಡಪ್ಸರ್ ಬಳಿಯ ಅಪಾರ್ಟ್`ಮೆಂಟಿನಲ್ಲಿ 34 ವರ್ಷದ ರಾಕೆಶ್ ಬಾಲಾಸಾಹೇಬ್ ಮತ್ತು ಸೊನಾಲಿ ರಾಕೇಶ್ ಮೃತದೇಹಗಳು ಪತ್ತೆಯಾಗಿವೆ.
ಸೂಸೈಡ್ ನೋಟ್ ಪ್ರಕಾರ, ಟೆಕ್ಕಿ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳೇ ಕಳೆದಿದ್ದರೂ ಮಕ್ಕಳಾಗಿರಲಿಲ್ಲ. ಹೀಗಾಗಿ, ಟೆಕ್ಕಿ ರಾಕೇಶ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಈ ಚಿಕಿತ್ಸೆಯ ವೈದ್ಯಕೀಯ ವರದಿಯ ಮಾಹಿತಿಯನ್ನ ಪತಿ ಸೊನಾಲಿ ವಾಟ್ಸಾಪ್ ಮೂಲಕ ತನ್ನ ಸ್ನೇಹಿತರು ಮತ್ತು ನೆಂಟರ ಜೊತೆ ಹಂಚಿಕೊಂಡಿದ್ದಳು. ಇದರಿಂದ ಮನನೊಂದ ಟೆಕ್ಕಿ ಹೆಂಡತಿಯನ್ನೂ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಕ್ಕಳಾಗದಿರುವ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ದಿನವೂ ದೊಡ್ಡ ಗಲಾಟೆ ನಡೆದಿದೆ ಎಂದು ಪೊಳಿಸರು ತಿಳಿಸಿದ್ದಾರೆ.
ಬುಧವಾರ ರಾತ್ರಿಯೇ ಸೋನಾಲಿ ತಾಯಿ ಛಾಯಾ ಹಲವು ಬಾರಿ ಫೋನ್ ಕರೆ ಮಾಡಿದ್ದಾರೆ. ಫೋನ್ ರಿಸೀವ್ ಆಗದ ಹಿನ್ನೆಲೆಯಲ್ಲಿ ಛಾಯ ಪುಣೆಯಲ್ಲಿರುವ ತನ್ನ ಮಗನಿಗೆ ಕರೆ ಮಾಡಿ ಸೊನಾಲಿ ಮನೆಗೆ ತೆರಳಿ ವಿಚಾರಿಸುವಂತೆ ತಿಳಿಸಿದ್ಧರೆ. ಮನೆಗೆ ಬಂದ ಸೊನಾಲಿ ಸಹೋದರ ೆಷ್ಟೇ ಕಾಲಿಂಗ್ ಬೆಲ್ ಹೊಡೆದರೂ ಬಾಗಿಲು ತೆರೆದಿಲ್ಲ. ಬಳಿಕ ಪೊಲಿಸರನ್ನ ಸಂಪರಕಿಸಿ ಬಾಗಿಲು ಹೊಡೆದಾಗ ಗೋರ ಕೃತ್ಯ ಬೆಳಕಿಗೆ ಬಂದಿದೆ.