Asianet Suvarna News Asianet Suvarna News

ಕಾನ್ಪುರ ಟೆಸ್ಟ್: ಮೊದಲ ದಿನದಾಟದಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 291 ರನ್

ತಲಾ ಅರ್ಧಶತಕ ಸಿಡಿಸಿದ ವಿಜಯ್ ಮತ್ತು ಪೂಜಾರ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು

team india normal score after first day

ಕಾನ್ಪುರ(ಸೆ.22): ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸಾಧಾರಣ ಮೊತ್ತ ಕಲೆ ಹಾಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು ಕೇವಲ 291 ರನ್ ಕಲೆಹಾಕಿದೆ. ತಲಾ ಅರ್ಧಶತಕ ಸಿಡಿಸಿದ ವಿಜಯ್ ಮತ್ತು ಪೂಜಾರ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು.

8 ರನ್ ಗಳಿಸಿರುವ ಯಾದವ್ ಮತ್ತು ಇನ್ನೂ ಖಾತೆ ತೆರೆಯದ ಶಮಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸ್ಕೋರ್ ವಿವರ: ಭಾರತ ಮೊದಲ ದಿನದಾಟದಂತ್ಯಕ್ಕೆ 291/9

- ಕೆ.ಎಲ್. ರಾಹುಲ್ - 32

- ಮುರಳಿ ವಿಜಯ್ - 65

- ಚೆತೇಶ್ವರ್ ಪೂಜಾರ - 62

- ವಿರಾಟ್ ಕೊಹ್ಲಿ - 09

- ಅಜಿಂಕ್ಯ ರಹಾನೆ - 18

- ರೋಹಿತ್ ಶರ್ಮಾ - 35

- ಆರ್. ಅಶ್ವಿನ್ - 40

- ವೃದ್ಧಿಮಾನ್ ಸಹಾ - 0

- ರವೀಂದ್ರ ಜಡೇಜಾ - 16

- ಮೊಹಮ್ಮದ್ ಶಮಿ - 0

- ಉಮೇಶ್ ಯಾದವ್ - 8

ಬೌಲಿಂಗ್:

ಟ್ರೆಂಟ್ ಬೋಲ್ಟ್ - 57/3

ಎಂ.ಜೆ. ಸ್ಯಾಂಟ್ನರ್ - 77/3