ಶಿಕ್ಷಕರಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲೇ ಹೆಚ್ಚಾಗಿ ತೊಡಗಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಬಯಲು ಶೌಚ ಮುಕ್ತ ದೇಶ ನಿರ್ಮಾಣಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಬಿಹಾರ ಸರ್ಕಾರ, ಶಿಕ್ಷಕರಿಗೆ ವಹಿಸಿದೆ.
ಶಿಕ್ಷಕರಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲೇ ಹೆಚ್ಚಾಗಿ ತೊಡಗಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಬಯಲು ಶೌಚ ಮುಕ್ತ ದೇಶ ನಿರ್ಮಾಣಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಬಿಹಾರ ಸರ್ಕಾರ, ಶಿಕ್ಷಕರಿಗೆ ವಹಿಸಿದೆ.
ಇದರನ್ವಯ ಶಿಕ್ಷಕರು ಪ್ರತಿ ಪಂಚಾಯ್ತಿ ಮತ್ತು ವಾರ್ಡ್’ಗಳಿಗೆ ಭೇಟಿ ನೀಡಿ ಅರಿವು ಮೂಡಿಸಬೇಕು. ತಮ್ಮ ಮಾತನ್ನು ಪುರಸ್ಕರಿಸದ ವ್ಯಕ್ತಿಗಳ ಫೋಟೊ ತೆಗೆದು ಕಳುಹಿಸಬೇಕು ಎಂದು ಸೂಚಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ.
ಆದರೆ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಬೆಳಗ್ಗೆ ಮತ್ತು ಸಂಜೆ ಕೆಲಹೊತ್ತು ಮಾತ್ರ ಸಮಯ ಮೀಸಲಿಟ್ಟರೆ ಅಂಥ ಸಮಸ್ಯೆಯಾಗದು ಎಂದು ಹೇಳಿಕೊಂಡಿದೆ.