ಗುವಾಹಟಿ[ಜೂ.19]: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ‘ಚೌಕೀದಾರ್ ಚೋರ್ ಹೈ’ ಎಂಬ ಕಾಂಗ್ರೆಸ್ ಘೋಷಣೆಗೆ ಪ್ರತಿಯಾಗಿ ಬಿಜೆಪಿ ನಾಯಕರು ‘ಮೈ ಭೀ ಚೌಕೀ ದಾರ್’ ಎಂಬ ಆಂದೋಲನ ಇದೀಗ ಅಸ್ಸಾಂನಲ್ಲಿ ಶಿಕ್ಷಕರಿಗೂ ಪ್ರೇರಣೆಯಾಗಿದೆ.

ರಾಜ್ಯದಲ್ಲಿ ಐದು ವರ್ಷಗಳ ಹಿಂದೆ ಪ್ರಮಾಣ ಪತ್ರ ಪಡೆದ ಶಿಕ್ಷಕರು ಸಹ ಚಾಲಕರ ಲೈಸನ್ಸ್‌ಗಳ ರೀತಿಯಲ್ಲೇ ತಮ್ಮ ಪ್ರಮಾನ ಪತ್ರ ನವೀಕರಿಸಿಕೊಳ್ಳಬೇಕೆಂದು ಅಸ್ಸಾಂ ಶಿಕ್ಷಣ ಸಚಿವ ಸಿದ್ಧಾ ರ್ಥ ಭಟ್ಟಾಚಾರ್ಯ ಹೇಳಿದ್ದಾರೆ.

ಈ ಹೇಳಿಕೆ ಖಂಡಿಸಿ ಟಿಇಟಿ (ಶಿಕ್ಷಕರ ಅರ್ಹತೆ ಪರೀಕ್ಷೆ) ಸರ್ಕಾರಿ ಶಾಲೆಯಲ್ಲಿ ಒಪ್ಪಂದದ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ನೂರಾರು ಶಿಕ್ಷಕರು ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿ ತಮ್ಮ ಹೆಸರಿನ ಹಿಂದೆ ಡ್ರೈವರ್ ಎಂದು ಸೇರಿಸಿಕೊಂಡು ಪ್ರತಿಭಟನೆ ಹಾದಿ ತುಳಿದಿದ್ದಾರೆ.