ಜಮ್ಮು-ಕಾಶ್ಮೀರ (ಜೂನ್.5): ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಎಸೆಗಿ, ಬ್ಲಾಕ್‌ಮೇಲ್ ಮಾಡುತ್ತಿದ್ದ ಜಮ್ಮುಕಾಶ್ಮೀರದ ಸರ್ಕಾರಿ ಶಿಕ್ಷಕನ್ನ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇಲೆ  ಕಿಶ್ತ್ವಾರ್ ಜಿಲ್ಲೆಯ ಸರ್ಕಾರಿ ಶಿಕ್ಷಕನನ್ನ ಅರೆಸ್ಟ್ ಮಾಡಿದ್ದಾರೆ. 

ಸರ್ಕಾರಿ ಆಸ್ಪತ್ರೆಯಲ್ಲಿ ತರಭೇತಿ ಪಡೆಯುತ್ತಿದ್ದ ಮಹಿಳೆಯನ್ನ ಮದವೆಯಾಗೋದಾಗಿ ಶಿಕ್ಷಕ ಮಾತು ಕೊಟ್ಟಿದ್ದ. ಸಂತ್ರಸ್ಥ ಮಹಿಳೆ, ಪೋಷಕರ ಬಳಿ ಮಾತನಾಡಲು ತಿಳಿಸಿದ್ದಳು. ಆದರೆ ಶಿಕ್ಷಕ ಬಲಂತವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪದೇ ಪದೇ ದೈಹಿಕ ಸಂಪರ್ಕಕ್ಕಾಗಿ ಪೀಡಿಸುತ್ತಿದ್ದ ಶಿಕ್ಷಕ ಆಕೆಯ ಬೆತ್ತಲೇ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಇಷ್ಟೇ ಅಲ್ಲ ಆಕೆಯ ಸಂಬಂಧಿಕರಿಗೆ ಕೆಲ ಫೋಟೋಗಳನ್ನ ಕಳುಹಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ.

ಶಿಕ್ಷನಿಂದ ಮಾನಸಿಕವಾಗಿ ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಪೋಷಕರು ನೆರವಿಗೆ ಧಾವಿಸಿದ್ದಾರೆ. ಬಳಿಕಕ ಕಿಶ್ತ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಡಿಎಸ್‌ಪಿ ಮನೋಜ್ ಕುಮಾರ್ ಶಿಕ್ಷಕನನ್ನ ಬಂಧಿಸಿದ್ದಾರೆ.