ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನವ ವಿವಾಹಿತ ಜೋಡಿಯನ್ನು ವಿವಾಹದ ದಿನವೇ ಸೇವೆಯಿಂದ ಕೈಬಿಟ್ಟ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಶ್ರೀನಗರ: ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನವ ವಿವಾಹಿತ ಜೋಡಿಯನ್ನು ವಿವಾಹದ ದಿನವೇ ಸೇವೆಯಿಂದ ಕೈಬಿಟ್ಟ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಶಿಕ್ಷಕ-ಶಿಕ್ಷಕಿ ಜೋಡಿಯ ‘ರೊಮಾನ್ಸ್’ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡಬಹುದು ಎಂಬುದು ಶಾಲಾಡಳಿತದ ಸ್ಪಷ್ಟನೆಯಾಗಿದೆ.
ತಾರಿಖ್ ಭಟ್ ಮತ್ತು ಸುಮಯಾ ಬಶೀರ್ ಮಧ್ಯೆ ವಿವಾಹಕ್ಕೆ ಮುನ್ನ ‘ರೊಮ್ಯಾಂಟಿಕ್ ಸಂಬಂಧ’ ಇದ್ದುದರಿಂದ, ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು, ಹೀಗಾಗಿ ಅವರನ್ನು ಸೇವೆಯಿಂದ ಕೈಬಿಡಲಾಗಿದೆ ಎಂದಿದೆ ಶಾಲೆ!
