ವಿದ್ಯಾರ್ಥಿಗಳನ್ನು ಶಿಕ್ಷಕ ಸೋಮಶೇಖರ್ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ವಿದ್ಯಾರ್ಥಿಗಳನ್ನ ಥಳಿಸಿ ಎಳೆದಾಡಿರುವ ದೃಶ್ಯಾವಳಿಗಳು ವೈರಲ್​ ಆಗಿದೆ.

ತುಮಕೂರು (ಮಾ.27): ಮೊಬೈಲ್ ಕದ್ದಿದ್ದಾರೆ ಎಂಬ ಕಾರಣಕ್ಕಾಗಿ ಶಿಕ್ಷಕನೋರ್ವ ವಿದ್ಯಾರ್ಥಿಗಳಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದಿದೆ.

ಸಿದ್ದಲಿಂಗೇಶ್ವರ ಸನಿವಾಸ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಕಾರಿನಲ್ಲಿದ್ದ 18 ಸಾವಿರ ಮೌಲ್ಯದ ಮೊಬೈಲನ್ನು ಕದ್ದಿದ್ದರು ಎನ್ನಲಾಗಿದೆ.

ಬಳಿಕ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕ ಸೋಮಶೇಖರ್ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ವಿದ್ಯಾರ್ಥಿಗಳನ್ನ ಥಳಿಸಿ ಎಳೆದಾಡಿರುವ ದೃಶ್ಯಾವಳಿಗಳು ವೈರಲ್​ ಆಗಿದೆ.