ನಗರಸಭೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಆಕೆಯ ಸಾವಿಗೆ ಕಾರಣವಾಗಿದ್ದ ಶಿಕ್ಷಕಿಯನ್ನು ಕೊಪ್ಪಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ(ಮಾ.27): ನಗರಸಭೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಆಕೆಯ ಸಾವಿಗೆ ಕಾರಣವಾಗಿದ್ದ ಶಿಕ್ಷಕಿಯನ್ನು ಕೊಪ್ಪಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣ ಅಸ್ಕಿ ಬಂಧನಕ್ಕೊಳಗಾಗಿರುವ ಶಿಕ್ಷಕಿ. ಅನ್ನಪೂರ್ಣ ಅಸ್ಕಿ ಮಾರ್ಚ್ 16 ರಂದು ನಗರಸಭೆ ಸಿಬ್ಬಂದಿ ಕೋಟ್ರಮ್ಮಳ ಮೇಲೆ ಹಲ್ಲೆ ಮಾಡಿದ್ದಳು. ಇದರಿಂದಾಗಿ ಕೋಟ್ರಮ್ಮ ಮಾನಸಿಕ ಅಘಾತಕ್ಕೆ ಒಳಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಳು. ಈ ಕುರಿತಂತೆ ಅನ್ನಪೂರ್ಣ ಅಸ್ಕಿ ವಿರುದ್ಧ ಮಾರ್ಚ 16ರಂದೇ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇಂದು ಕೋಟ್ರಮ್ಮ ಮೃತಪಟ್ಟಿರುವ ಹಿನ್ನಲೆಯಲ್ಲಿ ಆಕೆಯ ಸಾವಿಗೆ ಕಾರಣವಾದ ದೈಹಿಕ ಶಿಕ್ಷಕಿ ಅನ್ನಪೂರ್ಣ ಅಸ್ಕಿಯನ್ನು ಬಂಧಿಸುವಂತೆ ಕೋಟ್ರಮ್ಮ ಕುಟುಂಬಸ್ಥರು ಹಾಗೂ ನಗರಸಭೆ ಸಿಬ್ಬಂದಿ ಒತ್ತಾಯಿಸಿದ್ದರು. ಈ ಹಿನ್ನಲೆ ನಿನ್ನೆ ರಾತ್ರಿ ಕೊಪ್ಪಳ ನಗರ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
