ಹುಬ್ಬಳ್ಳಿ (ನ.14): ನವನಗರದ ಶಿವಾನಂದ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ರೂ.1000 ಮುಖಬೆಲೆಯ ನೋಟುಗಳನ್ನು ಬದಲಿಸಲು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿಗಳು ತಮ್ಮ ಆಧಾರ್‌ ಕಾರ್ಡ್‌ ಹಿಡಿದು ನೋಟು ಬದಲಿಸಲು ನವನಗರದ ಯೂನಿಯನ್‌ ಬ್ಯಾಂಕ್‌ ಮುಂದೆ ಕ್ಯೂನಲ್ಲಿ ನಿಂತಿದ್ದಾಗ ಸ್ಥಳೀಯರು ವಿಚಾ​​ರಿ​ಸಿದ್ದಾರೆ. ಶಿಕ್ಷಕ ತಮ್ಮಲ್ಲಿದ್ದ ರೂ.1000 ನೋಟು​ಗ​ಳ​ನ್ನು ಬದಲಿಸುವಂತೆ ನೀಡಿದ್ದಾರೆಂದು ತಿಳಿ​ಸಿ​ದ್ದಾರೆ. ಸ್ಥಳದ್ದಲ್ಲಿದ್ದವರು ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿ​ದಿದ್ದು, ವಿಡಿಯೋ ವಾಟ್ಸ್ಯಾಪ್‌ನಲ್ಲಿ ಹರಿದಾಡುತ್ತಿವೆ.

ರೂ.2 ಸಾವಿರ ನೋಟು ಅಪಹರಿಸಿ ಪರಾರಿ: ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ದೊಡ್ಡಳ್ಳಿ ನಿವಾಸಿ ಯೋಗೇಶ್‌ ಎಂಬುವವರಿಂದ ರೂ.2 ಸಾವಿರದ ನೋಟನ್ನು ನೋಡಿ​ಕೊಡುವುದಾಗಿ ಪಡೆದ ಕಿಡಿಗೇಡಿಯೊಬ್ಬ ನೋಟು ಪಡೆದು ಪರಾರಿಯಾದ ಘಟನೆ ಗುಡುಗಳಲೆ ಜಂಕ್ಷನ್‌ನಲ್ಲಿರುವ ಕೆನರಾ ಬ್ಯಾಂಕ್‌ ಮುಂದೆ ನಡೆದಿದೆ.